Select Your Language

Notifications

webdunia
webdunia
webdunia
webdunia

ಚೆನ್ನೈನಲ್ಲಿ ಭಾರಿ ಮಳೆಗೆ ಹಳಿ ಜಲಾವೃತ: ಕರ್ನಾಟಕದಿಂದ ತೆರಳಬೇಕಿದ್ದ 10 ರೈಲುಗಳು ರದ್ದು

South Western Railway

Sampriya

ಬೆಂಗಳೂರು , ಬುಧವಾರ, 16 ಅಕ್ಟೋಬರ್ 2024 (14:20 IST)
Photo Courtesy X
ಬೆಂಗಳೂರು: ಭಾರಿ ಮಳೆಗೆ ಹಳಿಗಳು ಜಲಾವೃತವಾಗಿರುವುದರಿಂದ ನೈರುತ್ಯ ರೈಲ್ವೆ ಬುಧವಾರ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಚೆನ್ನೈನ ಬೇಸಿನ್ ಬ್ರಿಡ್ಜ್ ಜೆಎನ್ ಮತ್ತು ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳ ಸಂಚಾರವನ್ನು ಇಂದು ರದ್ದು ಮಾಡಲಾಗಿದೆ.

ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಬುಧವಾರ ಭಾರೀ ಮಳೆ, ಗುಡುಗು, ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಕ್ಟೋಬರ್ 18 ರವರೆಗೆ ಬೆಂಗಳೂರು ಮತ್ತು ಕರಾವಳಿ, ಉತ್ತರ ಒಳಭಾಗ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿ. ಬೆಂಗಳೂರು ಸುತ್ತಮುತ್ತ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ: ಮಗುವಿಗಾದ್ರೂ ಒಳ್ಳೆ ಬುದ್ಧಿ ಕೊಡ್ಲಿ ಎಂದ ನೆಟ್ಟಿಗರು