Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಮುಳ್ಳಾಗಿ ಕಾಡುತ್ತಿರುವ ಕುಮಾರಸ್ವಾಮಿ: ಕಾಂಗ್ರೆಸ್

MUDA Scam BJP Protest

Sampriya

, ಗುರುವಾರ, 1 ಆಗಸ್ಟ್ 2024 (19:58 IST)
ಬೆಂಗಳೂರು: ಮುಡಾ ಹಗರಣದ ವಿರುದ್ಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ  ಪಾದಯಾತ್ರೆಯಿಂಸ ಜೆಡಿಎಸ್ ಹಿಂದೆ ಸರಿದಿದ್ದರಿಂದ ಮೈತ್ರಿಗಳ ನಡುವೆ ಕತ್ರಿ ಬಿತ್ತು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಕತ್ರಿ ಬಿದ್ದಿದೆ. ಮುಡಾ ಹಗರಣ ವಿರುದ್ಧದ ಪಾದಾಯತ್ರೆಯು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಂತಿಮಯಾತ್ರೆಗೆ ನಾಂದಿ ಹಾಡಲಿದೆ ಎಂದಿದೆ.

ಬಿಜೆಪಿಯ ಪಾದಯಾತ್ರೆ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿಯವರ ಬುಡ ಅಲ್ಲಾಡಿಸಲು ಸೃಷ್ಟಿಯಾದ ನಾಟಕ ಎನ್ನುವುದು ಜೆಡಿಎಸ್‌ ಪಕ್ಷಕ್ಕೆ ಈಗ ಅರ್ಥವಾದಂತಿದೆ, ಮತ್ತೊಂದೆಡೆ ಎಚ್ ಡಿಕುಮಾರಸ್ವಾಮಿ ಅವರು ಬಿಜೆಪಿಗೆ ಮಗ್ಗುಲು ಮುಳ್ಳಾಗಿ ಕಾಡಲು ಶುರು ಮಾಡಿದ್ದಾರೆ, ಅಂದಹಾಗೆ ಈ ಪಾದಯಾತ್ರೆ ಪಾಲಿಟಿಕ್ಸ್ ನಲ್ಲಿ ಯಾರ ಕಾಲನ್ನು ಯಾರು ಎಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲವೇ ಬಹಿರಂಗಪಡಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರುಣಾಜನಕವಾಗಿದೆ ವಯನಾಡು ಚಿತ್ರಣ: ರಾಹುಲ್ ಗಾಂಧಿ ಬೇಸರ