Select Your Language

Notifications

webdunia
webdunia
webdunia
webdunia

ಮುಂಬೈ ನ ಶೇ.86 ರಷ್ಟು ಮಂದಿಯಲ್ಲಿ ಕೋವಿಡ್-19 ಪ್ರತಿಕಾಯ

ಮುಂಬೈ ನ ಶೇ.86 ರಷ್ಟು ಮಂದಿಯಲ್ಲಿ ಕೋವಿಡ್-19 ಪ್ರತಿಕಾಯ
ಮುಂಬೈ , ಶನಿವಾರ, 18 ಸೆಪ್ಟಂಬರ್ 2021 (11:22 IST)
ಮುಂಬೈ : ಮುಂಬೈ ನ ಜನಸಂಖ್ಯೆಯ ಶೇ.86.64 ರಷ್ಟು ಮಂದಿಯಲ್ಲಿ ಕೋವಿಡ್-19 ವೈರಾಣು ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಸೆರೋ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಈ ಬಗ್ಗೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಈ ಅಂಕಿ-ಅಂಶಗಳನ್ನು ನೀಡಿದ್ದು, ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ 5 ನೇ ಬಾರಿಗೆ ನಡೆದಿರುವ ಸೆರೋ ಸಮೀಕ್ಷೆ ಇದಾಗಿದ್ದು, ಆ.12 ಹಾಗೂ ಸೆ.09 ರ ನಡುವೆ ನಡೆಸಲಾಗಿದೆ.
ಸ್ಲಮ್ ಗಳಲ್ಲಿ ಸೆರೋ ಪ್ರಿವೇಲೆನ್ಸ್ (ಪ್ರತಿಕಾಯಗಳ ಇರುವಿಕೆ) ಶೇ.87.02 ರಷ್ಟಿದ್ದು, ಬೇರೆ ಪ್ರದೇಶಗಳಲ್ಲಿ ಶೇ.86.22 ರಷ್ಟಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಕಳೆದ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಈ ಬಾರಿ ಗ್ರೇಟರ್ ಮುಂಬೈ ನಗರದ ಸ್ಲಮ್ ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿಕಾಯಗಳು ಹೆಚ್ಚಾಗಿದ್ದರೆ ಮುಂಬೈ ಐಲ್ಯಾಂಡ್ ಸಿಟಿ ಹಾಗೂ ಉಪನಗರಗಳಲ್ಲಿ ಮಹತ್ವದ ಬೆಳವಣಿಗೆಗಳು ಇಲ್ಲ ಎಂದು ಬಿಎಂಸಿ ಮಾಹಿತಿ ನೀಡಿದೆ.
ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದವರ ಪೈಕಿ ಶೇ.90.26 ರಷ್ಟು ಪ್ರತಿಕಾಯಗಳಿದ್ದರೆ, ಲಸಿಕೆ ಪಡೆಯದೇ ಇರುವ ಪ್ರದೇಶಗಳಲ್ಲಿ ಪ್ರತಿಕಾಯಗಳಿವೆ. ಮಹಿಳೆಯರಲ್ಲಿ ಶೇ.88.29 ರಷ್ಟು ಪ್ರತಿಕಾಯಗಳಿದ್ದರೆ, ಪುರುಷರಲ್ಲಿ ಶೇ.85.07 ರಷ್ಟು ಪ್ರತಿಕಾಯಗಳು ಪತ್ತೆಯಾಗಿವೆ. ಸಮೀಕ್ಷೆಗೊಳಪಟ್ಟ 8,674 ಮಾದರಿಗಳಲ್ಲಿ ಶೇ.20 ರಷ್ಟು ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈಲುಗಳ ವಿಳಂಬಕ್ಕೆ ರೈಲ್ವೆ ಇಲಾಖೆ ಪರಿಹಾರ ನೀಡಲೇಬೇಕೆಂದು ಸುಪ್ರೀಂ ಆದೇಶ