Select Your Language

Notifications

webdunia
webdunia
webdunia
webdunia

20 ವರ್ಷದ ಪತಿಗೆ ಗನ್ ತೋರಿಸಿ ಕಿವಿ ಕತ್ತರಿಸಿದ 40 ವರ್ಷದ ಪತ್ನಿ

20 ವರ್ಷದ ಪತಿಗೆ ಗನ್ ತೋರಿಸಿ ಕಿವಿ ಕತ್ತರಿಸಿದ 40 ವರ್ಷದ ಪತ್ನಿ
ಕೋಲ್ಕತಾ , ಬುಧವಾರ, 18 ಜುಲೈ 2018 (18:58 IST)
ಆಘಾತಕಾರಿ ಘಟನೆಯೊಂದರಲ್ಲಿ 40 ವರ್ಷ ವಯಸ್ಸಿನ ಪತ್ನಿಯೊಬ್ಬಳು, ಗಲ್ ತೋರಿಸಿ 20 ವರ್ಷ ವಯಸ್ಸಿನ ಪತಿಯ ಕಿವಿ ಕತ್ತರಿಸಿ ಕ್ರೂರತೆಯನ್ನು ಮೆರೆದಿದ್ದಾಳೆ. ಆಕೆಯ ಸಹೋದರಿಯರು ಕೂಡಾ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
ಕೋಲ್ಕತಾದ ನರ್ಕೆಲ್‌ದಂಗಾ ಪ್ರದೇಶದ ನಿವಾಸಿಯಾಗಿರುವ ತನ್ವೀರ್ ಗಾಯಗೊಂಡ ಸುದ್ದಿ ತಿಳಿದ ಆತನ ಕುಟುಂಬದವರು ಎನ್‌ಆರ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯಲು ನೆರವಾಗಿದ್ದಾರೆ.
 
ಆರೋಪ್ ಪತ್ನಿ ಮತ್ತು ಆಕೆಯ ಸಹೋದರಿಯರು ಪತಿ ಸಾವನ್ನಪ್ಪಿದ್ದಾನೆ ಎಂದು ಭಾವಿಸಿದ್ದರು. ಆದರೆ, ಜೀವ ಉಳಿಸಿಕೊಳ್ಳುವಲ್ಲಿ ಪತಿ .ಯಶಸ್ವಿಯಾಗಿದ್ದಾನೆ
 
ಗಾಯಗೊಂಡಿರುವ ತನ್ವೀರ್ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಮೂಲಗಳ ಪ್ರಕಾರ, ಮಮ್ತಾಜ್ ಪ್ರತಿದಿನ ಪತಿ ತನ್ವೀರ್‌ಗೆ ಟಾರ್ಚರ್ ನೀಡುತ್ತಿದ್ದಳು ಎನ್ನಲಾಗಿದೆ. ಹಲವು ಬಾರಿ ತನ್ವೀರ್ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ. ಮಮ್ತಾಜ್‌ಳ ಗೂಂಡಾಗಳು ಆತನನ್ನು ಹಿಡಿದು ತರುತ್ತಿದ್ದರು ಎನ್ನಲಾಗಿದೆ.  
 
ನಿನ್ನೆ ರಾತ್ರಿ ಮನೆಯಿಂದ ಓಡಿಹೋಗಲು ಪ್ರಯತ್ನಿಸಿದಾಗ ಪತ್ನಿಯ ಗೂಂಡಾಗಳು ನನ್ನನ್ನು ಹಿಡಿದು ತಂದು ಪತ್ನಿಯೊಂದಿಗೆ ಸೇರಿ ಕಿವಿ ಕತ್ತರಿಸಿದ್ದಾರೆ. ನನ್ನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಲ್ಲದೇ ಹತ್ಯೆಗೈಯುವ ಬೆದರಿಕೆ ಹಾಕಿದ್ದಾರೆ ಎಂದು ತನ್ವೀರ್ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾನೆ. 
 
ಸೊಸೆ ಮಮ್ತಾಜ್ ಹಿಂಸೆ ತಾಳದೇ ತನ್ವೀರ್ ತಾಯಿ, ಮನೆಯನ್ನು ಮಾರಿ ಬಂದ ಹಣವನ್ನು ಸೊಸೆಗೆ ಕೊಟ್ಟು ಮಗನನ್ನು ಬಿಡುವಂತೆ ಕೋರಿದ್ದಾಳೆ. ಆದರೆ, ಹಣವನ್ನು ಪಡೆದ ಮಮ್ತಾಜ್ ಮಗನನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಿಂಸೆ ನೀಡುವುದನ್ನು ಮುಂದುವರಿಸಿದ್ದಳು.
 
ಪೊಲೀಸರು ಆರೋಪಿಗಳ ವಿರುದ್ಧ ಜೀವ ಬೆದರಿಕೆ ಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಸರಕಾರ..!