ಬೆಂಗಳೂರು: ಒಂದು ವರ್ಷ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸಿದ ಸಂಬಂಧ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಾಲೆಳೆದು ನಿರೂಪಕ ಕಿರಿಕ್ ಕೀರ್ತಿ ಪೋಸ್ಟ್ ಮಾಡಿದ್ದಾರೆ.
ಧರ್ಮಸ್ಥಳ ಪರ ಧ್ವನಿ ಎತ್ತುತ್ತಿರುವ ಕಿರಿಕ್ ಕೀರ್ತಿ ಅವರು ಇದೀಗ ಮಹೇಶ್ ಶೆಟ್ಟಿ ಅವರ ಗಡಿಪಾರು ಆದೇಶ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಈಗ ಓಡಿ ಮಹೇಶಣ್ಣ ಓಡಿ... ಒಂದು ವರ್ಷದ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ತಿಮ್ಮರೋಡಿ ಗಡಿಪಾರು..ಏನೂ ಮಾಡಿಲ್ಲ ಅಂದ್ರೆ ಯಾಕೆ ಗಡಿಪಾರು ಮಾಡ್ತಾರೋ ಯೋಚಿಸಿ ಮಬ್ಬುಗಳೇ ಎಂದು ಬರೆದುಕೊಂಡಿದ್ದಾರೆ.
ಮಹೇಶ್ ಶೆಟ್ಟಿ ಅವರು ವಿಡಿಯೋ ಸಂದರ್ಶನದಲ್ಲಿ, ಸೌಜನ್ಯ ಪರ ಹೋರಾಟದ ಸಂದರ್ಭದಲ್ಲಿ ನನ್ನನ್ನು ಬಂಧಿಸಲು ಪೊಲೀಸರು ಬರುವ ಸುದ್ದಿ ತಿಳಿದು, ನನಗೆ ಕರೆ ಮಾಡಿ, ಓಡಿ ಮಹೇಶನ್ಣ ಓಡಿ ಎಂದು ಒಬ್ಬರು ಹೇಳಿದ್ದರು.
ಇದೀಗ ಅದೇ ಕಿರಿಕ್ ಕೀರ್ತಿ ಅದೇ ವಿಚಾರವನ್ನು ಮುಂದಿಟ್ಟು ಮಹೇಶ್ ಶೆಟ್ಟಿ ಅವರನ್ನು ಕುಟುಕಿದ್ದಾರೆ.