Select Your Language

Notifications

webdunia
webdunia
webdunia
webdunia

ಬೆಳ್ತಂಗಡಿ, ಗಿರೀಶ್ ಮಟ್ಟಣ್ಣನವರ್‌, ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್‌ ಶಾಕ್‌

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

Sampriya

ಮಂಗಳೂರು , ಸೋಮವಾರ, 1 ಸೆಪ್ಟಂಬರ್ 2025 (14:48 IST)
ಮಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿದ ಆರೋಪದಲ್ಲಿ ಮೇಲೆ ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್‌, ಮಹೇಶ್ ಶೆಟ್ಟಿ  ತಿಮರೋಡಿ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. 

ಬೆಳ್ತಂಗಡಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.

ಸಮಾಜದ ಸೌಹಾರ್ದಮಯ ವಾತಾವರಣವನ್ನು ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಮಟ್ಟಣ್ಣನವರ್ ಮತ್ತು ತಿಮರೋಡಿ ಯತ್ನಿಸಿದ್ದಾರೆ  ಎಂದು ಧರ್ಮಸ್ಥಳ ಗ್ರಾಮದ ಪ್ರವೀಣ್ ಕೆ.ಆರ್‌ ದೂರು ನೀಡಿದ್ದಾರೆ. 

ದೂರಿನಲ್ಲಿ, ಆ.30ರಂದು ಯುಟ್ಯೂಬ್‌ನಲ್ಲಿ ಕಂಡ ವಿಡಿಯೊವೊಂದರಲ್ಲಿ ಮದನ್ ಬುಗುಡಿ ಎಂಬ ವ್ಯಕ್ತಿಯ ಜತೆಗೂಡಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸಮಾಜದ ಸ್ವಾಸ್ಥ್ಯ ಕದಡುವ ಮಾತುಗಳನ್ನಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 

ಭಾರತೀಯ ನ್ಯಾಯಸಂಹಿತೆಯ ಕಲಂ 204, 319(2), 353(2), ಮತ್ತು 3(5) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅರುಣ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ಬಗ್ಗೆ ಗುಡುಗಿದ ಪ್ರಧಾನಿ ಮೋದಿ