Publish Date: Tue, 16 Feb 2021 (09:19 IST)
Updated Date: Tue, 16 Feb 2021 (09:22 IST)
ಗ್ರೇಟರ್ ನೊಯ್ಡಾ: ಇಬ್ಬರು ವ್ಯಕ್ತಿಗಳು ಅಪಹರಿಸಿದ 4 ವರ್ಷದ ಬಾಲಕನನ್ನು ಎಲ್ಲಿ ಬಚ್ಚಿಡುವುದು ಎಂದು ತಿಳಿಯದೆ ಕೊಲೆ ಮಾಡಿದ ಘಟನೆ ಗ್ರೇಟರ್ ನೊಯ್ಡಾದ ಸೂರಜ್ ಪುರದ ಜೌಗು ಪ್ರದೇಶದಲ್ಲಿ ನಡೆದಿದೆ.
ಹಣಕ್ಕಾಗಿ ಯುವರಿಬ್ಬರು ಬಾಲಕನನ್ನು ಅಪಹರಿಸಿದ್ದಾರೆ. ಆದರೆ ಬಾಲಕ ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ಇದರಿಂದ ಭಯಗೊಂಡ ಅಪಹರಣಕಾರರು ಬಾಲಕನನ್ನು ಪೊಲೀಸರ ಕಣ್ಣಿಂದ ತಪ್ಪಿಸ ಬಚ್ಚಿಡಲು ಸಾಧ್ಯವಾಗದೆ ಆತನನ್ನು ಕೊಲೆ ಮಾಡಿದ್ದಾರೆ. ಹೀಗಾಗಿ ಬಾಲಕನ ಶವ ಇತ್ತೀಚೆಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.