Publish Date: Thu, 16 May 2019 (14:01 IST)
Updated Date: Thu, 16 May 2019 (14:03 IST)
ಬಿಜೆಪಿಯವರು ಮಾತಿನ ಮಲ್ಲರು. ಕೇವಲ ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಂತ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ದೂರಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಕುಂದಗೋಳ, ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ದಾಖಲು ಮಾಡುತ್ತದೆ ಎಂದರು.
ಉಮೇಶ್ ಜಾಧವ್ ರನ್ನ ರಾಜಕೀಯಕ್ಕೆ ಕರೆತಂದಿದ್ದೇ ನಾನು ಮತ್ತು ಧರ್ಮಸಿಂಗ್. ನನನ್ನು ಸೋಲಿಸಲು ಮೋದಿ ಸೇರಿ ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ. ಸಂಸತ್ತಿನಲ್ಲಿ ಬೇರೆಯವರ ತರಹ ನಿದ್ರೆ ಮಾಡಿಲ್ಲ. ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ಇನ್ನು, ಸಿಎಂ ಹೆಚ್. ಡಿ. ಕುಮಾರಸ್ವಾಮಿ ನೀಡಿರುವ ಖರ್ಗೆ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಪದೇ ಪದೇ ದಲಿತ ಸಿಎಂ ಅಂತ ಹೇಳಿ ನನಗೆ ಅಪಮಾನ ಮಾಡಬೇಡಿ. ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಬರುತ್ತವೆ ಎಂದರು.
ನಾನು ಈ ಬಗ್ಗೆ ಕೇಳಲ್ಲ, ಅವರು ಈ ಬಗ್ಗೆ ಹೇಳಲ್ಲ ಅಂತ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ರು.