Select Your Language

Notifications

webdunia
webdunia
webdunia
webdunia

ಕೇತನ್ ಅಗರ್ವಾಲ್ ಪ್ರಾಣವೇ ಹೋದ ಮೇಲೆ ಸಿಯಾ ಗೋಯಲ್ ಸಹೋದರ ಹೀಗೆ ಹೇಳೋದಾ

Ketan Agarwal-Siya Goyal
ಪುಣೆ: ಯುವ ಉದ್ಯಮಿ ಕೇತನ್ ಅಗರ್ವಾಲ್ ಪ್ರಾಣವೇ ಹೋದ ಮೇಲೆ ಆರೋಪಿ ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್ ಪೊಲೀಸರ ಮುಂದೆ ನೀಡಿದ ಹೇಳಿಕೆ ವೈರಲ್ ಆಗಿದೆ.

ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಸಿಯಾ ಗೋಯಲ್, ನನಗೆ ಕೇತನ್ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಮನೆಯಲ್ಲಿ ಬಲವಂತ ಮಾಡಿದ್ದರು. ನಮ್ಮ ಪ್ರೀತಿ ವಿಚಾರ ಹೇಳಿದರೂ ಒಪ್ಪುತ್ತಿರಲಿಲ್ಲ.  ಮನೆಯವರ ಮರ್ಯಾದೆಗೆ ಅಂಜಿ ಮದುವೆಗೆ ಒಪ್ಪಿಕೊಂಡಿದ್ದೆ ಎಂದಿದ್ದಳು.

ಇದರ ಬಗ್ಗೆ ಈಗ ಸಿಯಾ ಸಹೋದರ ಸಾಹಿಲ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ಆರಂಭವಾದ ಪೊಲೀಸ್ ವಿಚಾರಣೆ ಸಂಜೆಯವರೆಗೂ ಮುಂದುವರಿದಿತ್ತು.

ಈ ವೇಳೆ ಸಾಹಿಲ್ ‘ಸಿಯಾಗೆ ಕೇತನ್ ಇಷ್ಟವಿಲ್ಲ ಎಂದಿದ್ದರೆ ಮದುವೆ ಮಾಡಿಸುತ್ತಿರಲಿಲ್ಲ’ ಎಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ಮದುವೆಗೆ ಮುನ್ನ ಒಪ್ಪಿಗೆಯಿದೆಯೇ ಎಂದು ಕೇಳಿರಲಿಲ್ಲವೇ? ನೀವು ಅಷ್ಟು ಮುಕ್ತವಾಗಿದ್ದಿದ್ದರೆ ಆಕೆ ಯಾಕೆ ತನಗೆ ಇಷ್ಟವಿಲ್ಲ ಎಂದು ಹೇಳಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡ್ಡಮತದಾನ ಆಂತರಿಕ ತನಿಖೆ ವರದಿ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆ: ಸಿ.ಟಿ. ರವಿ