Select Your Language

Notifications

webdunia
webdunia
webdunia
webdunia

ಕೇತನ್ ಅಗರ್ವಾಲ್ ನಿಜಕ್ಕೂ ಕೊಲೆಯಾಗಿದ್ದು ಹೇಗೆ.. ನಾನವನಲ್ಲ, ನಾನವಳಲ್ಲ ಎನ್ನುತ್ತಾ ಸಿಯಾ, ಚೇತನ್ ಹೇಳಿದ್ದೇನು

Ketan Agarwal-Siya Goyal
ಪುಣೆ: ಯುವ ಉದ್ಯಮಿ ಕೇತನ್ ಅಗರ್ವಾಲ್ ನಿಜಕ್ಕೂ ಕೊಲೆಯಾಗಿದ್ದು ಹೇಗೆ? ನಾನವನಲ್ಲ, ನಾನವಳಲ್ಲ ಎನ್ನುತ್ತಾ ಚೇತನ್ ಮತ್ತು ಸಿಯಾ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದೇನು ಇಲ್ಲಿದೆ ವಿವರ.

ಪುಣೆಯ ಯುವ ಉದ್ಯಮಿ, 26 ವರ್ಷದ ಕೇತನ್ ಅಗರ್ವಾಲ್ ರನ್ನು ಬರ್ತ್ ಡೇ ಆಚರಿಸುವ ನೆಪದಲ್ಲಿ ಲೋಹಗಢ್ ಕೋಟೆಗೆ ಕರೆದೊಯ್ದ ಭಾವೀ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರನ ಜೊತೆ ಸೇರಿಕೊಂಡು 400 ಅಡಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ ಎಂದು ಆರೋಪವಾಗಿದೆ.

ಈ ಸಂಬಂಧ ಸಿಯಾ ಮತ್ತು ಪ್ರಿಯಕರ ಚೇತನ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮೊದಲು ಇಬ್ಬರೂ ಕೊಲೆ ಮಾಡಿದ್ದು ಯಾರು ಎಂದರೆ ನಾನವನಲ್ಲ, ನಾನವಳಲ್ಲ ಎಂದು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದರು. ಸಿಯಾ ಮೇಲೆ ಚೇತನ್ ದೂರು ಹಾಕಿದರೆ ಚೇತನ್ ಮೇಲೆ ಸಿಯಾ ಆರೋಪ ಮಾಡುತ್ತಿದ್ದಳು.

ಕೊನೆಗೆ ಸಿಯಾ ಹೇಳಿರುವ ಪ್ರಕಾರ ಈ ಮೊದಲು ಎರಡು ಬಾರಿ ಲೋಹಗಢ್ ಕೋಟೆಗೆ ಕೇತನ್ ನನ್ನು ಕರೆದೊಯ್ದು ಆಕೆ ಕೊಲೆ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಹೀಗಾಗಿ ಈ ಬಾರಿ ನಿನ್ನಿಂದಾಗಲ್ಲ. ನಾನೇ ಬರುತ್ತೇನೆ ಎಂದು ಚೇತನ್ ಬಂದಿದ್ದ. ಅದರಂತೆ ಜೂನ್ 18 ರಂದು ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದ. ತಮ್ಮ ದಾರಿಗೆ ಅಡ್ಡವಾಗಿದ್ದ ಕೇತನ್ ನನ್ನು ಮುಗಿಸಲು ಚೇತನ್ ಒತ್ತಡ ಹೇರುತ್ತಿದ್ದ ಎಂದು ಸಿಯಾ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಇನ್ನು, ಇಬ್ಬರೂ ಸೇರಿಕೊಂಡೇ ಆತನನ್ನು ತಳ್ಳಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ, ಡಿಕೆ ಶಿವಕುಮಾರ್ ನಡುವೆ ಯಾವ ಸಂಬಂಧವೂ ಇಲ್ಲ: ಬಿವೈ ವಿಜಯೇಂದ್ರ