Publish Date: Thu, 25 Jun 2026 (16:15 IST)
Updated Date: Thu, 25 Jun 2026 (16:19 IST)
ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪುಣೆ ಗ್ರಾಮಾಂತರ ಪೊಲೀಸರಿಗೆ ಹತ್ಯೆಯ ಹಿಂದಿನ ಗೂಢ ಸಂಚನ್ನು ಸಾಬೀತುಪಡಿಸುವ ಮತ್ತೊಂದು ಪ್ರಮುಖ ಸಿಸಿಟಿವಿ ಸಾಕ್ಷ್ಯ ಲಭ್ಯವಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಕೇತನ್ ಜೂನ್ 18 ರಂದು ಲೋಹಗಢ್ ಕೋಟೆಯಲ್ಲಿ ಕಂದಕಕ್ಕೆ ಬಿದ್ದು ಸಾವನ್ನಪ್ಪುವ ಕೇವಲ ಒಂದು ದಿನದ ಮುಂಚೆ, ಅಂದರೆ ಜೂನ್ 17 ರಂದು ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಇವರಿಬ್ಬರೂ ಕೆಫೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಒಟ್ಟಿಗೆ ಕಳೆದಿದ್ದಾರೆ. ಇದೇ ವೇಳೆ ಕೇತನ್‌ನನ್ನು ಹೇಗೆ ಮುಗಿಸಬೇಕು ಎಂಬ ಅಂತಿಮ ತಂತ್ರ ರೂಪಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಭೆಯ ಸಮಯದಲ್ಲಿ ಸಿಯಾ ಗೋಯಲ್ ತನ್ನ ಮೊಬೈಲ್‌ನಲ್ಲಿ ಲೋಹಗಢ್ ಕೋಟೆಯ ಕುರಿತಾದ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಆ ಕೋಟೆಯ ದುರ್ಗಮ ಹಾದಿ ಮತ್ತು ಕಂದಕಗಳ ಸಂಪೂರ್ಣ ಮಾಹಿತಿಯನ್ನು ಚೇತನ್ ಚೌಧರಿ ಜೊತೆಗೆ ಹಂಚಿಕೊಂಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಬಲ ನೀಡಿದ ಡಿಜಿಟಲ್ ಪುರಾವೆಯೋಜಿತ ಸಂಚು : ಈ ಕೆಫೆ ಭೇಟಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇಬ್ಬರ ಮೊಬೈಲ್ ಇಂಟರ್ನೆಟ್ ಸರ್ಚ್ ಹಿಸ್ಟರಿ,, ಇದು ಆಕಸ್ಮಿಕವಾಗಿ ನಡೆದ ಕೊಲೆಯಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿ ಮಾಡಲಾದ ಕೃತ್ಯ ಎಂಬುದಕ್ಕೆ ಪ್ರಮುಖ ತಾಂತ್ರಿಕ ಪುರಾವೆಯಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಸ್ತುತ ಈ ಹೈಪ್ರೊಫೈಲ್ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪೊಲೀಸರ ಈ ಎಲ್ಲಾ ಆರೋಪಗಳು ಮತ್ತು ಸಾಕ್ಷ್ಯಗಳು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಾನೂನು ಪ್ರಕ್ರಿಯೆಯ ವೇಳೆ ಪರೀಕ್ಷೆಗೆ ಒಳಪಡಲಿವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ