Daily Horoscope

Select Your Language

Notifications

webdunia
webdunia
webdunia
webdunia

ಇಷ್ಟೆಲ್ಲಾ ಮಾಡಿದ್ರೂ ಕೇತನ್ ಅಗರ್ವಾಲ್ ಹತ್ಯೆ ಮಾಡಿದ್ದಕ್ಕೆ ಸಿಯಾ ಗೋಯಲ್ ಗೆ ಶಿಕ್ಷೆಯಾಗೋದು ಅಷ್ಟು ಸುಲಭವಲ್ಲ

Ketan Agarwal-Siya Goyal-Chethan Chaudhary
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಆರೋಪಿಗಳಾಗಿದ್ದಾರೆ. ಆದರೆ ಇಬ್ಬರ ಮೇಲಿನ ಆರೋಪಗಳು ಸಾಬೀತಾಗಿ ಶಿಕ್ಷೆಯಾಗುವುದು ಅಷ್ಟು ಸುಲಭವಲ್ಲ.

ಈ ಪ್ರಕರಣ ಸಾಕ್ಷ್ಯಗಳ ಕೊರತೆಯಿಂದ ಬಿದ್ದು ಹೋಗುವ ಅಪಾಯವೂ ಇದೆ ಎನ್ನಲಾಗುತ್ತಿದೆ. ಪುಣೆ ಉದ್ಯಮಿ ಕೇತನ್ ಅಗರ್ವಾಲ್ ರನ್ನು ಆತನ ಭಾವೀ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಲೋಹಗಢ್ ಕೋಟೆಯ 400 ಅಡಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಈ ಸಂಬಂಧ ಇಬ್ಬರನ್ನೂ ಬಂಧಿಸಿ ಪೊಲೀಸರು ಹಲವು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ.

ಆದರೆ ಪ್ರಕರಣದಲ್ಲಿ ಇಬ್ಬರಿಗೂ ಪ್ಲಸ್ ಪಾಯಿಂಟ್ ಆಗಿರುವುದು ಕೇತನ್ ರನ್ನು ತಳ್ಳಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸಿಯಾ ಮತ್ತು ಚೇತನ್ ನಡುವೆ ಯಾರು ತಳ್ಳಿದ್ದಾರೆ ಅಥವಾ ಇವರೇ ತಳ್ಳಿದ್ದಾರೆಯೇ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷ್ಯಗಳಿಲ್ಲ. ಇದು ಇಬ್ಬರೂ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಹೀಗಾಗಿ ಪೊಲೀಸರು ಈಗ ಸಿಯಾ ಗೋಯಲ್ ಳನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಕೋರ್ಟ್ ಅನುಮತಿ ಪಡೆದು ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕಿದೆ. ಸಾಕಷ್ಟು ಡಿಜಿಟಲ್, ಪರೋಕ್ಷ ಸಾಕ್ಷ್ಯಗಳನ್ನು ಸಂಗ್ರಹಿಸಿದರೂ ಇವರೇ ತಳ್ಳಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಸಿಗದೇ ಇದ್ದರೆ ಕೇಸ್ ದುರ್ಬಲವಾಗುವ ಭೀತಿಯಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಜೊತೆ ಸಮಾಲೋಚನೆ ಮಾಡಿ: ಬಿ.ವೈ.ವಿಜಯೇಂದ್ರ