Publish Date: Wed, 01 Jul 2026 (16:38 IST)
Updated Date: Wed, 01 Jul 2026 (16:40 IST)
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಮರ್ಡರ್ ಕೇಸ್ ನಲ್ಲಿ ಭಾವೀ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಇದೊಂದು ವಿಚಾರ ರಹಸ್ಯವಾಗಿಯೇ ಉಳಿದಿದೆ.
ಜೂನ್ 18 ರಂದು ಲೋಹಗಢ್ ಕೋಟೆಗೆ ಬರ್ತ್ ಡೇ ಆಚರಿಸುವ ನೆಪದಲ್ಲಿ ಕೇತನ್ ನನ್ನು ಕರೆದೊಯ್ದಿದ್ದ ಸಿಯಾ ತನ್ನ ಪ್ರಿಯಕರ ಚೇತನ್ ಜೊತೆಗೂಡಿ ಉಪಾಯವಾಗಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಆದರೆ ಕೊಲೆಯ ನಂತರವೂ ಕೇತನ್ ಫೋನ್ ಸಿಯಾ ಬಳಿಯಿತ್ತು.
ಒಂದು ವೇಳೆ ಕೇತನ್ ಫೋಟೋ ತೆಗೆಯುತ್ತಿದ್ದರೆ ಫೋನ್ ಆತನ ಕೈಯಲ್ಲೇ ಇರಬೇಕಿತ್ತು. ಇಲ್ಲದೇ ಹೋದರೆ ಫೋನ್ ಜೇಬಿನಲ್ಲಿರಬೇಕಿತ್ತು. ಆದರೆ ಇದ್ಯಾವುದೂ ಆಗದೇ ಆತ ಕಂದಕಕ್ಕೆ ಬೀಳುವ ಮೊದಲು ಫೋನ್ ಸಿಯಾ ಕೈಗೆ ಹೇಗೆ ಬಂತು ಎಂಬುದೇ ಪ್ರಶ್ನೆಯಾಗಿದೆ.
ಘಟನೆ ನಡೆದು ಎರಡು ದಿನ ಕೇತನ್ ಫೋನ್ ನನ್ನು ಸಿಯಾ ತನ್ನ ಬಳಿಯಿಟ್ಟುಕೊಂಡಿದ್ದಳು. ನಂತರ ಆತನ ಕುಟುಂಬದವರಿಗೆ ಹಸ್ತಾಂತರಿಸಿದ್ದಳು ಎಂದು ತಿಳಿದುಬಂದಿದೆ. ಇದೀಗ ಫೋನ್ ಆಕೆಯ ಕೈಗೆ ಹೇಗೆ ಬಂತು ಮತ್ತು ಅದರಲ್ಲಿದ್ದ ಮಾಹಿತಿಗಳನ್ನು ಆಕೆ ಡಿಲೀಟ್ ಮಾಡಿದ್ದಳೇ ಎಂಬ ಅಂಶವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ