Select Your Language

Notifications

webdunia
webdunia
webdunia
webdunia

ನಮ್ಮ ಮಗಳು ಕುಡಿಯಲ್ಲ, ಪಾರ್ಟಿ ಮಾಡಲ್ಲ ಎಂದಿದ್ದ ಸಿಯಾ ಗೋಯಲ್ ಪೋಷಕರು: ಆದ್ರೆ ಈ ವಿಡಿಯೋದಲ್ಲಿರೋದೇ ಬೇರೆ

Siya Goyal
ಪುಣೆ: ಕೇತನ್ ಅಗರ್ವಾಲ್ ಮರ್ಡರ್ ಆರೋಪಿ ಸಿಯಾ ಗೋಯಲ್ ಪೋಷಕರು ನಮ್ಮ ಮಗಳು ಪಾರ್ಟಿಗೆ ಹೋಗ್ತಿರಲಿಲ್ಲ, ಕುಡಿಯಲ್ಲ ತುಂಬಾ ಸಿಂಪಲ್ ಹುಡುಗಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಬೇರೆಯೇ ಕತೆ ಹೇಳುತ್ತಿದೆ.

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ರನ್ನು ಭಾವೀ ಪತ್ನಿ ಸಿಯಾ ಗೋಯಲ್ ಲೋಹಗಢ್ ಕೋಟೆಗೆ ಕರೆದೊಯ್ದು ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿಕೊಂಡು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ ಎಂಬುದು ಆರೋಪವಾಗಿದೆ. ಈ ಸಂಬಂಧ ಇಬ್ಬರನ್ನೂ ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ.

ಈ ನಡುವೆ ಸಿಯಾ ಪೋಷಕರು ತಮ್ಮ ಮಗಳು ಈ ರೀತಿ ಮಾಡಿದ್ದಾಳೆ ಎಂದರೆ ನಂಬಲೇ ಆಗುತ್ತಿಲ್ಲ. ಅವಳಿಗೆ ಚೇತನ್ ಜೊತೆಗೆ ಸಂಬಂಧವಿರಲಿಲ್ಲ. ಅವರಿಬ್ಬರು ಫ್ರೆಂಡ್ಸ್ ಆಗಿದ್ದಿರಬಹುದು. ಆದರೆ ಕೇತನ್ ಜೊತೆ ಮದುವೆಯಾಗಲು ಅವಳೇ ಅನುಮತಿ ನೀಡಿದ್ದಳು. ನಮ್ಮ ಮಗಳು ಪಾರ್ಟಿಗೆ ಹೋಗ್ತಿರಲಿಲ್ಲ, ಮದ್ಯಪಾನ ಮಾಡ್ತಿರಲಿಲ್ಲ ಎಂದೆಲ್ಲಾ ಹೇಳಿಕೆ ನೀಡಿದ್ದರು.

ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಯಾ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಪಬ್ ಒಂದರಲ್ಲಿ ಯಾರ ಜೊತೆಗೋ ಫೋನ್ ನಲ್ಲಿ ಕೂಗಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಪಾಪ ಪೋಷಕರಿಗೆ ಮಗಳು ಇಷ್ಟೆಲ್ಲಾ ಮಾಡ್ತಿದ್ದರೂ ಗೊತ್ತೇ ಇರಲಿಲ್ವೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

pic.twitter.com/UkxeiSvpon

 

— Divya Gandotra Tandon (@divya_gandotra) July 1, 2026

Share this Story:

Follow Webdunia kannada

ಮುಂದಿನ ಸುದ್ದಿ

ಕೇತನ್ ಅಗರ್ವಾಲ್ ಮರ್ಡರ್ ಪ್ರಕರಣದಲ್ಲಿ ಪೊಲೀಸರಿಗೆ ಇದೊಂದು ವಿಚಾರ ಇನ್ನೂ ರಹಸ್ಯವಾಗಿಯೇ ಉಳಿದಿದೆ