Select Your Language

Notifications

webdunia
webdunia
webdunia
webdunia

ಮೊಮ್ಮಗನ ಹಿಂದೆಯೇ ಹೊರಟ ಕೇತನ್ ಅಗರ್ವಾಲ್ ತಾತ: ಅಗರ್ವಾಲ್ ಕುಟುಂಬಕ್ಕೆ ಮತ್ತೊಂದು ಆಘಾತ

Ketan Agarwal grandfather
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಸಾವನ್ನಪ್ಪಿದ 16 ದಿನಗಳಿಗೆ ಅವರ ಮನೆಯಲ್ಲಿ ಮತ್ತೊಂದು ಸಾವಾಗಿದೆ. ಮೊಮ್ಮಗನ ಹಿಂದೆಯೇ ತಾನ ದೇವಿಚಂದ್ ಅಗರ್ವಾಲ್ ಸಾವನ್ನಪ್ಪಿದ್ದಾರೆ.

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ರನ್ನು ಆತನ ಭಾವೀ ಪತ್ನಿ ಸಿಯಾ ಗೋಯಲ್ ಲೋಹಗಢ ಕೋಟೆಗೆ ಕರೆದೊಯ್ದು ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿಕೊಂಡು ಆಳವಾದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ. ಈ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ.

ಈ ಪ್ರಕರಣ ಅಗರ್ವಾಲ್ ಕುಟುಂಬಕ್ಕೆ ಸಹಿಸಲಾರದ ಅಘಾತ ನೀಡಿದೆ. ಮೊಮ್ಮಗನ ಸಾವಿನ ಬಗ್ಗೆ ಈ ಹಿಂದೆ ಮಾಧ್ಯಮಗಳ ಮುಂದೆ ದೇವಿಚಂದ್ ಅಗರ್ವಾಲ್ ತೀರಾ ದುಃಖದಿಂದಲೇ ಪ್ರತಿಕ್ರಿಯಿಸಿದ್ದರು. ನಮಗೆ ದೊಡ್ಡ ಮೋಸವಾಗಿದೆ ಎಂದಿದ್ದರು.

ಇದೀಗ ಮೊಮ್ಮಗನ ಸಾವಿನ ದುಃಖದಲ್ಲಿ ತಾತನೂ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ 71 ವರ್ಷದ ದೇವಿಚಂದ್ ಮೊಮ್ಮಗನ ಸಾವಿನ ಬಳಿಕ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ಅವರು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಗೊಳಗಾಗಿದ್ದರು. ಇದೀಗ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಬಂದಿದೆ. ಇದು ಕೇತನ್ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೆ ಹೋರಾಡಿ ಜಯ ಪಡೆದು ಏನು ಪ್ರಯೋಜನವಾಯ್ತು