ಕೇರಳದ ಮಲ್ಲಪುರಂನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದೆರಡು ದಿನಗಳ ಹಿಂದೆ ಸಂಭವಿಸಿದ ಬಾಂಬ್ ಸ್ಟೋಟದ ತನಿಖೆ ಪ್ರಗತಿಯಲ್ಲಿದ್ದು ಘಟನಾ ಸ್ಥಳದಲ್ಲಿ ಸಿಕ್ಕ ಪೆನ್ ಡ್ರೈವ್ ಮತ್ತು ಒಂದು ಪತ್ರ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಹೊರಹಾಕಿದೆ.
ಸ್ಥಳದಲ್ಲಿ ಸಿಕ್ಕ ಪೆನ್ ಡ್ರೈವ್‌ನಲ್ಲಿ ಪ್ರಧಾನಿ ಮೋದಿ, ಕೆಂಪುಕೋಟೆ, ಸಂಸತ್, ಮುಂಬೈ ಸ್ಪೋಟದ ಅಪರಾಧಿ ಯಾಕುಬ್ ಮೆಮನ್, ದಾದ್ರಿ ಬಲಿಪಶು ಅಖ್ಲಾಕ್ ಭಾವಚಿತ್ರಗಳು ಮತ್ತು ಬಾಬ್ರಿ ಮಸೀದಿ ನಾಶ, ಗುಜರಾತ್ ಗಲಭೆ ವಿಡಿಯೋಗಳಿವೆ. ಮೋದಿ ಫೋಟೋ ದೊರೆತಿರುವುದು ಉಗ್ರರ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಿ ಇದ್ದಾರೆ ಎಂಬ ಸಂಕೇತಗಳನ್ನು ನೀಡಿದೆ. ಪೊಲೀಸರು ಘಟನಾ ಸ್ಥಳದಿಂದ ವಶಪಡಿಸಿಕೊಂಡ ಪತ್ರದಲ್ಲಿ ದಾದ್ರಿಯಲ್ಲಿ ಹತ್ಯೆಯಾದ ಮೊಹಮ್ಮದ್ ಅಖ್ಲಾಕ್ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇವೆ, ಮತ್ತೊಂದು ಸ್ಪೋಟವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಬಾಬ್ರಿ ಮಸೀದಿ ನಾಶದ ಬಳಿಕ ಅಸ್ತಿತ್ವಕ್ಕೆ ಬಂದಿರುವ ತಮಿಳುನಾಡು ಮೂಲದ ಉಗ್ರ ಸಂಘಟನೆ ಅಲ್- ಉಲ್ಮಾ ಈ ದಾಳಿ ಹಿಂದೆ ಇರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತ ಪಡಿಸಿವೆ.
1998ರಲ್ಲಿ ನಡೆದ ಕೊಯಿಮತ್ತೂರು ಬ್ಲಾಸ್ಟ್ ಬಳಿಕ ನಿಷೇಧಕ್ಕೆ ಒಳಪಟ್ಟಿರುವ ಈ ಸಂಘಟನೆಗೆ 'ಬೇಸ್ ಮೂವ್‌ಮೆಂಟ್' ಎಂಬ ಹೆಸರು ಕೂಡ ಇದೆ.
ಮಹಾರಾಷ್ಟ್ರ ಮತ್ತು ತಮಿಳುನಾಡು ನ್ಯಾಯಾಲಯಗಳಲ್ಲಿ ಇಂತಹ ದಾಳಿ ನಡೆಸಲು 'ಬೇಸ್ ಮೂವ್‌ಮೆಂಟ್' ಬದ್ಧವಾಗಿದೆ ಎಂಬ ಸಂದೇಶ ಕೂಡ ಪೆನ್ ಡ್ರೈವ್‌ನಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ