Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕೇಜ್ರಿವಾಲ್‌‌ಗೆ ಗಂಟಲು ಶಸ್ತ್ರಚಿಕಿತ್ಸೆ

ಬೆಂಗಳೂರಿನಲ್ಲಿ ಕೇಜ್ರಿವಾಲ್‌‌ಗೆ  ಗಂಟಲು ಶಸ್ತ್ರಚಿಕಿತ್ಸೆ
ನವದೆಹಲಿ: , ಮಂಗಳವಾರ, 6 ಸೆಪ್ಟಂಬರ್ 2016 (13:25 IST)
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಗಿಂದಾಗೆ ಮರುಕಳಿಸುವ ಕೆಮ್ಮಿನ ಸಮಸ್ಯೆ ಗುಣಪಡಿಸಲು ಗಂಟಲು ಶಸ್ತ್ರಚಿಕಿತ್ಸೆ ಸಲುವಾಗಿ ಹಾಗೂ ಪಂಜಾಬ್‌ನಲ್ಲಿ ಚುನಾವಣೆಗೆ ಎಎಪಿಯ ಸಿದ್ಧತೆ ಅವಲೋಕನಕ್ಕಾಗಿ ರಾಜಧಾನಿಯಿಂದ 15 ದಿನಗಳ ಕಾಲ ದೂರವುಳಿಯಲಿದ್ದಾರೆ. ಕೇಜ್ರಿವಾಲ್ ಕೆಮ್ಮಿನ ಸಮಸ್ಯೆ ನಿವಾರಣೆಗೆ ಸೆ. 13ರಂದು ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಅಲ್ಲಿ 10 ದಿನಗಳ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
 
ಬೆಂಗಳೂರಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಸೆ. 8ರಿಂದ ನಾಲ್ಕು ದಿನಗಳ ಕಾಲ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಪಂಜಾಬ್‌ನಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.
 
ಇದಾದ ಬಳಿಕ ಬೆಂಗಳೂರಿಗೆ ಸೆ. 12ರಂದು ತೆರಳಿ ಮರುದಿನವೇ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. ಸೆ. 22ರಂದು ಅವರು ಹಿಂತಿರುಗುವ ನಿರೀಕ್ಷೆಯಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿ ತಿಳಿಸಿದರು.
 
ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮುಖ್ಯಮಂತ್ರಿಗಳ ಕೆಲಸವನ್ನು ನಿರ್ವಹಿಸಲಿದ್ದಾರೆ.
ಕಳೆದ ತಿಂಗಳು ಕೇಜ್ರಿವಾಲ್ ಧರ್ಮಶಾಲಾದ ಧ್ಯಾನಕೇಂದ್ರದಲ್ಲಿ  ಆ. 2ರಿಂದ 11ರವರೆಗೆ ವಿಪಾಸನಾ ಸೆಷನ್‌ನಲ್ಲಿ ಭಾಗವಹಿಸಿದ್ದರು. ಜನವರಿಯಲ್ಲಿ ಬೆಂಗಳೂರಿನ ಜಿಂಡಾಲ್ ನಿಸರ್ಗ ಚಿಕಿತ್ಸೆಯ ಕೇಂದ್ರದಲ್ಲಿ ನ್ಯಾಚ್ಯುರೋಪತಿ ಚಿಕಿತ್ಸೆಗೆ ಒಳಪಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ತಮಿಳು ಸಿನೆಮಾ ಪ್ರದರ್ಶನಕ್ಕೆ ವಿರೋಧ