Mock Drill: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟು ಹೊತ್ತಿಗೆ ನಡೆಯಲಿದೆ ಮಾಕ್ ಡ್ರಿಲ್ ಇಲ್ಲಿದೆ ವಿವರ

Krishnaveni K
ಮಂಗಳವಾರ, 6 ಮೇ 2025 (14:07 IST)
Photo Credit: X
ಬೆಂಗಳೂರು: ಪಾಕಿಸ್ತಾನದ ಜೊತೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರ ನಾಳೆ ಎಲ್ಲಾ ರಾಜ್ಯಗಳಲ್ಲಿ ಮಾಕ್ ಡ್ರಿಲ್ ಮಾಡುವ ಘೋಷಣೆ ಮಾಡಿದೆ. ನಾಳೆ ಕರ್ನಾಟಕದ ಯಾವೆಲ್ಲಾ ರಾಜ್ಯಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಇಲ್ಲಿದೆ ವಿವರ.

ಕರ್ನಾಟಕದ ಮೂರು ಭಾಗಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ರಾಯಚೂರು, ಕಾರವಾರ ಮತ್ತು ಬೆಂಗಳೂರು ನಗರದಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ. ಮಾಕ್ ಡ್ರಿಲ್ ನಲ್ಲಿ ಎನ್ ಸಿಸಿ, ಎನ್ಎಸ್ಎಸ್, ಸಿವಿಲ್ ಡಿಫೆನ್ಸ್ ಮತ್ತು ವೈದ್ಯರು ಭಾಗಿಯಾಗಲಿದ್ದಾರೆ.  ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಠಾಣೆ ಸೇರಿ 35 ಕಡೆ ಸೈರನ್ ಮೊಳಗಲಿದೆ. ಈ ಸಂದರ್ಭದಲ್ಲಿ ಜನರು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಕೇಂದ್ರ ಸುತ್ತೋಲೆ ಹೊರಡಿಸಲಿದೆ.

ತುರ್ತು ಸಂದರ್ಭಗಳಲ್ಲಿ ನಾವು ಏನು ಮಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು, ತುರ್ತು ಸಂದರ್ಭಗಳಿಗೆ ನಾವು ಎಷ್ಟು ಸಿದ್ಧರಿದ್ದೇವೆ ಎಂದು ಪರೀಕ್ಷಿಸಿಕೊಳ್ಳಲು ಈ ಮಾಕ್ ಡ್ರಿಲ್ ನಡೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಡಾ ಹಗರಣ: ತನಿಖಾ ಸ್ಥಿತಿಗತಿ ವರದಿ ಸಲ್ಲಿಸಿದ ಲೋಕಾಯುಕ್ತರು

ಬಿಹಾರ, ಉತ್ತರ ಪ್ರದೇಶ ನಡುವೆ ರಾಮ ಸೀತೆಯ ಬಾಂಧವ್ಯವಿದೆ: ಯೋಗಿ

ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ: ಸಂತೋಷ್ ಹೆಗ್ಡೆ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments