Select Your Language

Notifications

webdunia
webdunia
webdunia
webdunia

ಬರ್ತ್ ಡೇಗೆ ತಂದ ಬಲೂನ್ ಮೇಲಿತ್ತು 'I love Pakistan'

ಬರ್ತ್ ಡೇಗೆ ತಂದ ಬಲೂನ್ ಮೇಲಿತ್ತು 'I love Pakistan'
ಉತ್ತರ ಪ್ರದೇಶ , ಗುರುವಾರ, 26 ಅಕ್ಟೋಬರ್ 2017 (15:50 IST)
ಉತ್ತರ ಪ್ರದೇಶ: ಮಗಳ ಹುಟ್ಟುಹಬ್ಬಕ್ಕಾಗಿ ಮಾರುಕಟ್ಟೆಯಿಂದ ತಂದ ಬಲೂನ್‌‌ಗಳ ಮೇಲೆ 'I love Pakistan' ಎಂಬ ಬರಹ ಇರುವುದು ಪತ್ತೆಯಾಗಿದೆ.

ಉತ್ತರ ಪ್ರದೇಶದ ಕಾನ್ಪುರ್‌ದಲ್ಲಿ ಈ ಘಟನೆ ನಡೆದಿದೆ. ತಂದೆ ತಮ್ಮ ಮಗಳ ಹುಟ್ಟುಹಬ್ಬಕ್ಕಾಗಿ ಮಾರುಕಟ್ಟೆಯಿಂದ ಬಲೂನ್‌ ತಂದು ಮನೆಯಲ್ಲಿ ಅವುಗಳಿಗೆ ಗಾಳಿ ತುಂಬಲು ಮುಂದಾಗಿದ್ದಾರೆ. ಈ ವೇಳೆ ಅವುಗಳ ಮೇಲೆ 'I love Pakistan' ಎಂಬ ಬರಹ ಇರುವುದು ಕಂಡು ಬಂದಿದೆ. ಕೂಡಲೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿರುವ ಪೊಲೀಸರು ಬಲೂನ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಅವು ಎಲ್ಲಿಂದ ಬಂದವು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು