Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ಮೊದಲು ಮೆದುಳು ಪರೀಕ್ಷೆ ಮಾಡಿಸಿಕೊಳ್ಳಬೇಕು: ಅಣ್ಣಾಮಲೈ ಕಿಡಿ

Annamalai

Krishnaveni K

ಚೆನ್ನೈ , ಮಂಗಳವಾರ, 9 ಏಪ್ರಿಲ್ 2024 (15:12 IST)
Photo Courtesy: Twitter
ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಗೆ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ನಟ, ರಾಜಕಾರಣಿ ಕಮಲ್ ಹಾಸನ್ ಬಿಜೆಪಿ ವಿರುದ್ಧ ಮಾಡಿದ ಕಾಮೆಂಟ್ ಗೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಮಲ್ ಹಾಸನ್ ಟೀಕಾ ಪ್ರಹಾರ ನಡೆಸಿದ್ದಾರೆ. ಈ ವೇಳೆ ಮುಂದಿನ ಸಾರಿಯೂ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ರಾಷ್ಟ್ರದ ರಾಜಧಾನಿ ದೆಹಲಿಯಿಂದ ನಾಗ್ಪುರಕ್ಕೆ ಶಿಫ್ಟ್ ಆಗಲಿದೆ ಎಂದು ವ್ಯಂಗ್ಯ ಮಾಡಿದ್ದರು. ನಾಗ್ಪುರ ಆರ್ ಎಸ್ಎಸ್ ನ ಕೇಂದ್ರ ಸ್ಥಾನ ಎನ್ನುವ ಕಾರಣಕ್ಕೆ ಕಮಲ್ ಈ ರೀತಿ ವ್ಯಂಗ್ಯ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅಣ್ಣಾಮಲೈ ಕಮಲ್ ಹಾಸನ್ ಗೆ ಎಲ್ಲವೂ ಸರಿಯಾಗಿದೆಯಾ? ಅವರು ಸರಿಯಾಗಿ ಹೊಟ್ಟೆಗೆ ಅನ್ನ ತಿನ್ನುತ್ತಿದ್ದಾರಾ? ಅವರು ಮಾತನಾಡುವುದನ್ನು ನೋಡಿದರೆ ಮೊದಲು ಅವರ ಮೆದುಳು ಪರೀಕ್ಷೆ ಮಾಡುವುದು ಉತ್ತಮ. ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ನಾಗ್ಪುರಕ್ಕೆ ಶಿಫ್ಟ್ ಮಾಡಲು ಹೇಗೆ ಸಾಧ‍್ಯ? ಮಾತನಾಡುವುದಕ್ಕೆ ಸೆನ್ಸ್ ಬೇಡವೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಷ್ಟೇ ಅಲ್ಲದೆ, ಕಮಲ್ ಹಾಸನ್, ನಮಗೆ ಗುಜರಾತ್ ಮಾಡೆಲ್ ಎಂದಿದ್ದು ಸಾಕು. ನಮಗೆ ದ್ರಾವಿಡಿಯನ್ ಮಾಡೆಲ್ ನ ಆಡಳಿತ ಬೇಕು.ಅದಕ್ಕಾಗಿ ನಾವು ಡಿಎಂಕೆಯನ್ನು ಬೆಂಬಲಿಸೋಣ ಎಂದು ಕರೆ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿಯಲ್ಲಿ ಪಾಲು ಕೊಡದ ಅತ್ತೆ- ಮಾವ: ರೊಚ್ಚಿಗೆದ್ದ ಸೊಸೆಯಿಂದ ಅಡಿಕೆ ಸಸಿಗಳ ನೆಲಸಮ