ಅಮ್ಮನನ್ನು ಮನೆಯಲ್ಲಿ ಕೂಡಿಹಾಕಿ ಕುಂಭಮೇಳಕ್ಕೆ ಹೋದ ಮಗ: ಈ ಪಾಪಕ್ಕೆ ಪರಿಹಾರವಿದೆಯೇ

Krishnaveni K
ಶುಕ್ರವಾರ, 21 ಫೆಬ್ರವರಿ 2025 (10:29 IST)
Photo Credit: X
ಜಾರ್ಖಂಡ್: ಹೆತ್ತ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೆಂಬ ಮಹಾಶಯ ಪತ್ನಿ ಜೊತೆ ಪಾಪ ಕಳೆಯಲು ಕುಂಭಮೇಳಕ್ಕೆ ಹೋದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡುವುದೇ ಪಾಪ ಕಳೆಯಲೆಂದು. ಆದರೆ ಈ ಮಗ ಹೆತ್ತ ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಘೋರ ಪಾಪ ಮಾಡಿದ್ದಾನೆ. 65 ವರ್ಷದ ಸಂಜು ದೇವಿ ಎಂಬ ಮಹಿಳೆಯನ್ನು ಮಗ ಅಖಿಲೇಶ್ ಕುಮಾರ್ ಮನೆಯಲ್ಲಿಯೇ ಕೂಡಿ ಹಾಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕುಂಭಮೇಳಕ್ಕೆ ತೆರಳಿದ್ದಾನೆ.

ಹಸಿವಿನಿಂದಾಗಿ ವೃದ್ಧ ಮಹಿಳೆ ಮನೆಯಲ್ಲಿ ಉಳಿದಿದ್ದ ಒಣಗಿದ ಬ್ರೆಡ್ ತಿಂದು ಹೇಗೋ ಸಮಯ ಕಳೆದಿದ್ದಾಳೆ. ಆದರೆ ಅದೂ ಮುಗಿದು ಹಸಿವು ತಾಳಲಾರದೇ ಮನೆಯೊಳಗಿನಿಂದಲೇ ಕೂಗಿ ನೆರೆಹೊರೆಯವರನ್ನು ಕರೆದಿದ್ದಾಳೆ.

ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬೀಗ ತೆಗೆದು ವೃದ್ಧ ಮಹಿಳೆಯನ್ನು ರಕ್ಷಿಸಿದ್ದಾರೆ. ಇದು ಮಗ ಮತ್ತು ಸೊಸೆ ವಿರುದ್ಧ ಕೇಸ್ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಉಡುಪಿಯಲ್ಲಿ ಪ್ರಧಾನಿ ಮೋದಿ ಕರೆಕೊಟ್ಟ 9 ಸಂಕಲ್ಪಗಳು ಯಾವುವು ನೋಡಿ

ನಾಯಕತ್ವ ಬದಲಾವಣೆ ಕಿಚ್ಚಿನ ನಡುವೆ ಡಿಕೆಶಿಯನ್ನು ಭೇಟಿಯಾದ ಶಾಸಕರು ಇವರೇ

ಮುಂದಿನ ಸುದ್ದಿ
Show comments