Select Your Language

Notifications

webdunia
webdunia
webdunia
webdunia

ಅಮ್ಮನನ್ನು ಮನೆಯಲ್ಲಿ ಕೂಡಿಹಾಕಿ ಕುಂಭಮೇಳಕ್ಕೆ ಹೋದ ಮಗ: ಈ ಪಾಪಕ್ಕೆ ಪರಿಹಾರವಿದೆಯೇ

Jharkhand mother

Krishnaveni K

ಜಾರ್ಖಂಡ್ , ಶುಕ್ರವಾರ, 21 ಫೆಬ್ರವರಿ 2025 (10:29 IST)
Photo Credit: X
ಜಾರ್ಖಂಡ್: ಹೆತ್ತ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೆಂಬ ಮಹಾಶಯ ಪತ್ನಿ ಜೊತೆ ಪಾಪ ಕಳೆಯಲು ಕುಂಭಮೇಳಕ್ಕೆ ಹೋದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡುವುದೇ ಪಾಪ ಕಳೆಯಲೆಂದು. ಆದರೆ ಈ ಮಗ ಹೆತ್ತ ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಘೋರ ಪಾಪ ಮಾಡಿದ್ದಾನೆ. 65 ವರ್ಷದ ಸಂಜು ದೇವಿ ಎಂಬ ಮಹಿಳೆಯನ್ನು ಮಗ ಅಖಿಲೇಶ್ ಕುಮಾರ್ ಮನೆಯಲ್ಲಿಯೇ ಕೂಡಿ ಹಾಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕುಂಭಮೇಳಕ್ಕೆ ತೆರಳಿದ್ದಾನೆ.

ಹಸಿವಿನಿಂದಾಗಿ ವೃದ್ಧ ಮಹಿಳೆ ಮನೆಯಲ್ಲಿ ಉಳಿದಿದ್ದ ಒಣಗಿದ ಬ್ರೆಡ್ ತಿಂದು ಹೇಗೋ ಸಮಯ ಕಳೆದಿದ್ದಾಳೆ. ಆದರೆ ಅದೂ ಮುಗಿದು ಹಸಿವು ತಾಳಲಾರದೇ ಮನೆಯೊಳಗಿನಿಂದಲೇ ಕೂಗಿ ನೆರೆಹೊರೆಯವರನ್ನು ಕರೆದಿದ್ದಾಳೆ.

ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬೀಗ ತೆಗೆದು ವೃದ್ಧ ಮಹಿಳೆಯನ್ನು ರಕ್ಷಿಸಿದ್ದಾರೆ. ಇದು ಮಗ ಮತ್ತು ಸೊಸೆ ವಿರುದ್ಧ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಇಂದೇ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ