Publish Date: Thu, 18 Jan 2018 (09:40 IST)
Updated Date: Thu, 18 Jan 2018 (09:42 IST)
ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಒಂದು ದಿನದ ಮಟ್ಟಿಗೆ ಮುಚ್ಚಿಟ್ಟಿದ್ದರು ಎಂದು ಶಶಿಕಲಾ ಆಪ್ತ ಸಂಬಂಧಿ ವಿ ದಿನಕರನ್ ಬಹಿರಂಗಪಡಿಸಿದ್ದಾರೆ.
ಎಐಎಡಿಎಂಕೆ ಸಂಸ್ಥಾಪಕ ಎಂ ಜಿ ರಾಮಚಂದ್ರನ್ (ಎಂಜಿಆರ್) ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನಕರನ್ ಜಯಲಲಿತಾ ಡಿಸೆಂಬರ್ 4 ರಂದು ಮುಂಜಾನೆ ಮೃತಪಟ್ಟಿದ್ದರು ಎಂದಿದ್ದಾರೆ.
ಡಿಸೆಂಬರ್ 5 ರಂದು ಜಯಲಲಿತಾ ಸಾವಿನ ಸುದ್ದಿಯನ್ನು ತಡ ರಾತ್ರಿ ಘೋಷಿಸಲಾಗಿತ್ತು. ಆದರೆ ನಿಜವಾಗಿ ಜಯಲಲಿತಾ ಡಿಸೆಂಬರ್ 4 ರಂದು ಮುಂಜಾನೆ 5.50 ಕ್ಕೆ ಮೃತಪಟ್ಟಿದ್ದರು. ಆದರೆ ಭದ್ರತೆ ಕಾರಣಗಳಿಂದ ಒಂದು ದಿನ ತಡವಾಗಿ ಘೋಷಿಸಲಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ