ಜಮ್ಮು ಮತ್ತು ಕಾಶ್ಮೀರ: ಇಲ್ಲಿ ಸಂಭವಿಸಿದ ಮೇಘಸ್ಪೋಟಕ್ಕೆ ಕಟ್ಟಡಗಳು, ವಾಹನಗಳು ಇರುವೆಗಳಂತೆ ಕೊಚ್ಚಿ ಹೋದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶನಿವಾರ ರಂಬಾನ್ ಜಿಲ್ಲೆಯಲ್ಲಿ ಭಾರೀ ಮಳೆ, ದಿಡೀರ್ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ನೋಡ ನೋಡುತ್ತಿದ್ದಂತೇ ಕಟ್ಟಡಗಳು, ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಸ್ತೆ ಯಾವುದು, ನದಿ ಯಾವುದು ಎಂದು ತಿಳಿಯದಂತಾಗಿದೆ.
ಇದುವರೆಗೆ ಸುಮಾರು 12 ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಈಗಾಗಲೇ ಸುಮಾರು 100 ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ.
ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆಗಳಲ್ಲಿ ಕಲ್ಲು ಬಂಡೆಗಳು, ವಾಹನಗಳು, ಕಟ್ಟಡಗಳ ಅವಶೇಷಗಳು ನಿಂತಿವೆ. ಎಲ್ಲಿ ನೋಡಿದರೂ ಮಣ್ಣು, ನೀರು ಅಷ್ಟೇ ಕಾಣಿಸುತ್ತಿದೆ. ಮೇಘಸ್ಪೋಟದ ವಿಡಿಯೋ ಇಲ್ಲಿದೆ ನೋಡಿ.