Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾ ಸ್ಟಾರ್‌ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ

Jammu Kashmir Social Star Simran Singh, Simran Singh No More, Jammu Kashmir Radio Jockey

Sampriya

ನವದೆಹಲಿ , ಗುರುವಾರ, 26 ಡಿಸೆಂಬರ್ 2024 (20:05 IST)
Photo Courtesy X
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮೂಲದ ಸೋಷಿಯಲ್‌ ಮೀಡಿಯಾ ಸ್ಟಾರ್‌ ಹಾಗೂ ರೇಡಿಯೋ ಜಾಕಿ ಸಿಮ್ರಾನ್‌ ಸಿಂಗ್‌ (25) ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷ ಅಭಿಮಾನಿಗಳನ್ನು ಒಳಗೊಂಡಿದ್ದ ಸಿಮ್ರಾನ್‌, ಇದೇ ತಿಂಗಳ ಡಿಸೆಂಬರ್‌ 13ರಂದು ಕೊನೆಯದ್ದಾಗಿ ರೀಲ್ಸ್‌ವೊಂದನ್ನ ಪೋಸ್ಟ್‌ ಮಾಡಿದ್ದರು. ಬಳಿಕ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.

ಸಿಮ್ರಾನ್‌ ಗುರುಗ್ರಾಮ್‌ ಸೆಕ್ಟರ್‌-47ರಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಆಕೆಯ ಸ್ನೇಹಿತನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಆಕೆಯ ಮೃತದೇಹವನ್ನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಜಮ್ಮು ಪ್ರದೇಶದ ನಿವಾಸಿಯಾಗಿರುವ ಆಕೆಯನ್ನ ಅವರ ಅಭಿಮಾನಿಗಳು ʻಜಮ್ಮು ಕಿ ಧಡ್ಕನ್ (ಜಮ್ಮುವಿನ ಹೃದಯ ಬಡಿತ)ʼ ಎಂದು ಕರೆಯುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಖರ್ಗೆ ಆಪ್ತನ ಕಿರುಕುಳಕ್ಕೆಯೇ ಬೀದರ್ ಗುತ್ತಿಗೆದಾರ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ