Select Your Language

Notifications

webdunia
webdunia
webdunia
webdunia

ಜಲಜೀವನ್ ಮಿಷನ್ ಯೋಜನೆ ದುರ್ಬಳಿಕೆ

ಜಲಜೀವನ್ ಮಿಷನ್ ಯೋಜನೆ ದುರ್ಬಳಿಕೆ
ಬೆಂಗಳೂರು , ಶನಿವಾರ, 10 ಸೆಪ್ಟಂಬರ್ 2022 (16:01 IST)
ಜಲಜೀವನ್ ಮಿಷನ್' ಯೋಜನೆಯ ಪರಿಣಾಮಕಾರಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಕೊರೆಯುವ ಹೆಸರಲ್ಲಿ ಲೂಟಿ ಹೊಡೆಯುವ ಕಾರ್ಯ ಮುಂದುವರಿದಿದೆ.
 
ಈ ಮೊದಲು ಕೊರೆಸಿರುವ ಕೊಳವಿ ಬಾವಿಯ ಅದೇ ಸ್ಥಳ, ಜಿಪಿಎಸ್​ನಲ್ಲಿ ಕೊರೆಸಿರುವಂತೆ ಫೋಟೋಶಾಪ್ ಮಾಡಿದ ನಕಲಿ ಫೋಟೋ ಮತ್ತು ಬಿಲ್​ಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ
 
ಲೆಕ್ಕದ ಪ್ರಕಾರ ಮೂರೂ ಜಿಲ್ಲೆಗಳಲ್ಲಿ 21,700 ಕೊಳವೆ ಬಾವಿ ಕೊರೆಸಲಾಗಿದೆ. ತಲಾ ಕೊಳವೆ ಬಾವಿಗೆ 2 ರಿಂದ 5 ಲಕ್ಷ ರೂ.ವರೆಗೆ ಬಿಲ್ ಮಾಡಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಸರಾಸರಿ 3 ಲಕ್ಷ ರೂ.ನಂತೆ ಲೆಕ್ಕ ಹಾಕಿದರೂ 21,700 ಬೋರ್​ವೆಲ್​ಗಳಿಗೆ 651 ಕೋಟಿ ರೂ. ವಿನಿಯೋಗಿಸಲಾಗಿದೆ.
 
ಕೇಂದ್ರದ ಯೋಜನೆಯಡಿ ಒಮ್ಮೆ, ರಾಜ್ಯದ ಯೋಜನೆಯಡಿಯಲ್ಲೂ ಮತ್ತೊಮ್ಮೆ ಬಿಲ್ ಪಡೆದು ವಂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೀನ್ಯಾ ದಲ್ಲಿ ಕನ್ನಡಿಗರ ಹಬ್ಬ? ಏನಿದರ ವಿಶೇಷ..!!!