Select Your Language

Notifications

webdunia
webdunia
webdunia
webdunia

ಆಧುನಿಕ "ಬಾಹುಬಲಿ "ಧೈರ್ಯ ಸಾಹಸ ಅಬ್ಬಬ್ಬಾ ...!!!

ಆಧುನಿಕ
ಬೆಂಗಳೂರು , ಶನಿವಾರ, 10 ಸೆಪ್ಟಂಬರ್ 2022 (14:10 IST)
ವಿಶಾಖಪಟ್ಟಣಂ :ವಿದ್ಯಾರ್ಥಿನಿಯೊಬ್ಬರು ವಿಶಾಖಪಟ್ಟಣಂನಲ್ಲಿ ಪರೀಕ್ಷೆಗೆ ಹಾಜರಾಗಲು ತುಂಬಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಇಬ್ಬರು ಸಹೋದರರ ನೆರವಿನಿಂದ ಈಜಿ ದಾಟಿದ ಅಪರೂಪದ ಘಟನೆ ವರದಿಯಾಗಿದೆ.
 
ತಡ್ಡಿ ಕಲಾವತಿ ಎಂಬಾಕೆ ಈ ಸಾಹಸಿ ವಿದ್ಯಾರ್ಥಿನಿ. ಶನಿವಾರ ನಡೆಯುವ ಪರೀಕ್ಷೆಗಾಗಿ ಶುಕ್ರವಾರ ವಿಶಾಖಪಟ್ಟಣಂಗೆ ವಾಪಸ್ಸಾಗಲು ಹೊರಟಿದ್ದರು. ಭಾರಿ ಮಳೆಯ ಕಾರಣದಿಂದ ಚಂಪಾವತಿ ನದಿ ಉಕ್ಕಿ ಹರಿಯಲಾರಂಭಿಸಿತ್ತು. ಇದರಿಂದಾಗಿ ಮರ್ರಿವಲಸ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು.
 
ಪರೀಕ್ಷೆಯ ವಿಷಯ ತಿಳಿದು ಆಕೆಯ ಇಬ್ಬರು ಸಹೋದರರು ಆಕೆಯನ್ನು ಚಂಪಾವತಿ ನದಿಯ ಮತ್ತೊಂದು ದಡಕ್ಕೆ ಕರೆದೊಯ್ಯಲು ಮುಂದಾದರು. ಇಬ್ಬರು ಸಹೋದರರು ಆಕೆಯನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಕುತ್ತಿಗೆ ಮುಳುಗುವಷ್ಟು ನೀರಿದ್ದರೂ, ತಮ್ಮ ಜೀವಾಪಾಯವನ್ನು ಲೆಕ್ಕಿಸದೇ ನದಿ ದಾಟಿಸಿದರು.
 
ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತ ಗೊಂಡಿದ್ದು ,ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ ,ಇನ್ನೊಂದು ಸೂಕ್ತ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ

Share this Story:

Follow Webdunia kannada

ಮುಂದಿನ ಸುದ್ದಿ

ಮೇಡ್ ಇನ್ ಇಂಡಿಯಾ ಐಫೋನ್ ಉತ್ಪಾದನೆ