Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಮಾಜಿ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂನಿಂದ ಕೊನೆಗೂ ಬಿಗ್‌ ರಿಲೀಫ್‌

Ex-IAS Probationary Officer Pooja Khedkar, Supreme Court Bail, Civil Service Examination

Sampriya

ನವದೆಹಲಿ , ಬುಧವಾರ, 21 ಮೇ 2025 (17:43 IST)
Photo Courtesy X
ನವದೆಹಲಿ: ಮಾಡಿದ ತಪ್ಪಿಗಾಗಿ ಜೈಲು ಸೇರಿರುವ ಮಾಜಿ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ.

ಖೇಡ್ಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಸತೀಶ ಚಂದ್ರ ಅವರಿದ್ದ ಪೀಠ ತನಿಖೆಗೆ ಸಹಕರಿಸುವಂತೆ ಪೂಜಾ ಖೇಡ್ಕರ್‌ ಗೆ ಸೂಚಿಸಿದೆ.

ನಕಲಿ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದುಕೊಂಡ ಆರೋಪ ಪೂಜಾ ಖೇಡ್ಕರ್‌ ಮೇಲಿದೆ. 2023ರ ಬ್ಯಾಚ್‌ನ ಐಎಎಸ್ ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ ತನ್ನ ಆಯ್ಕೆಗಾಗಿ ಒಬಿಸಿ ಕೋಟಾ ಮತ್ತು ಅಂಗವಿಕಲರ ಕೋಟಾವನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಜುಲೈನಲ್ಲಿ ಆಕೆಯ ವಿರುದ್ದ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಗರಂ ಆದ ಘಟನೆಯೂ ನಡೆಯಿತು. ಆಕೆ ಮಾಡಿದ ಘೋರ ಅಪರಾಧವೇನು? ಅವರು ಡ್ರಗ್ಸ್ ಮಾರಾಟಗಾರ್ತಿಯೇ? ಅಥವಾ ಭಯೋತ್ಪಾದಕಿಯೇ? ಆಕೆ ಏನಾದರೂ ಕೊಲೆ ಮಾಡಿದ್ದಾಳೆಯೇ? ಎನ್‌ಡಿಪಿಎಸ್‌ ಕಾಯ್ದೆಯಡಿ ಅವರ ಬಂಧನವಾಗಿಲ್ಲ, ನೀವು ತನಿಖೆ ಪೂರ್ಣಗೊಳಿಸಿ. ಎಲ್ಲವನ್ನು ಕಳೆದುಕೊಂಡಿರುವ ಆಕೆಗೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಪೀಠ ಹೇಳಿದೆ.

ಪೂಜಾ ಖೇಡ್ಕರ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಕ್ಕೆ ದೆಹಲಿ ಪೊಲೀಸರು ಮತ್ತು ಯುಪಿಎಸ್‌ಸಿ ವಿರೋಧ ವ್ಯಕ್ತಪಡಿಸಿವೆ. ಆಕೆ ಆಯೋಗ ಮತ್ತು ಜನರನ್ನು ವಂಚಿಸಿದ್ದಾಳೆ. ಆಕೆ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಸುಪ್ರೀಂ ಕೋರ್ಟ್ ಗೆ ತಕರಾರು ಸಲ್ಲಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದೇ ಇದ್ದರೆ.. ಇದು ಬೈರತಿ ಬಸವರಾಜು ಶಪಥ