Select Your Language

Notifications

webdunia
webdunia
webdunia
webdunia

Chhattisgarh Encounter: ಛತ್ತೀಸ್‌ಗಢದಲ್ಲಿ ಗುಂಡಿನ ಸದ್ದು: 26 ನಕ್ಸಲನ್ನು ಬೇಟೆಯಾಡಿದ ಭದ್ರತಾ ಪಡೆ

Chhattisgarh encounter, operation against Naxals, security force encounter

Sampriya

ಛತ್ತೀಸ್‌ಗಢ , ಬುಧವಾರ, 21 ಮೇ 2025 (14:35 IST)
Photo Courtesy X
ಛತ್ತೀಸ್‌ಗಢ: ಛತ್ತೀಸಗಢದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ. ನಾರಾಯಣ್ ಪುರ-ಬಿಜಾಪುರ್ ಗಡಿಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 26 ನಕ್ಸಲರು ಹತರಾಗಿದ್ದಾರೆ. ಇಂದು ನಸುಕಿನ ಜಾವ ಆರಂಭವಾದ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ.

ಛತ್ತೀಸ್‌ಗಢರಾಜ್ಯ ಪೊಲೀಸರು ನಕ್ಸಲ್ ವಿರೋಧಿ ನಿಗ್ರಹ ಕಾರ್ಯಾಚರಣೆ ಪ್ರಾರಂಭಿಸಿದ್ದು, ದಟ್ಟ ಅರಣ್ಯ ಅಭುಜ್‌ಮದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಪೊಲೀಸರ ಬೆಂಬಲಿಗ ಮೃತಪಟ್ಟಿದ್ದಾರೆ ಮತ್ತು ಒಬ್ಬರು ಪೊಲೀಸರಿಗೆ ಗಾಯವಾಗಿದೆ.

ನಾರಾಯಣ್ ಪುರ, ಬಿಜಾಪುರ್, ದಂತೇವಾಡ ಮತ್ತು ಕಾಂಕೇರ್ ಜಿಲ್ಲೆಗಳಿಂದ ಜಿಲ್ಲಾ ಮೀಸಲು ಪಡೆ ಜಂಟಿ ತಂಡಗಳ ಮೇಲೆ ಶಸ್ತ್ರಸಜ್ಜಿತ ಮಾವೋವಾದಿಗಳು ಹೊಂಚುದಾಳಿ ನಡೆಸಿದ ನಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು. ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭದ್ರತಾ ಪಡೆ ಸಿಬ್ಬಂದಿಯು ನಕ್ಸಲರ ಅಡಗುತಾಣವನ್ನು ಸಮೀಪಿಸುತ್ತಿದ್ದಂತೆ ನಕ್ಸಲರು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ಪ್ರತೀಕಾರದ ಕ್ರಮದಲ್ಲಿ, 26 ಕ್ಕೂ ಹೆಚ್ಚು ಮಾವೋವಾದಿಗಳು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

Booker Prize: ಪ್ರಶಸ್ತಿಯೊಂದಿಗೆ ಬರೋಬ್ಬರಿ ₹57.28 ಲಕ್ಷ ಬಹುಮಾನ ಪಡೆದ ಕನ್ನಡದ ಸಾಹಿತಿ ಬಾನು ಮುಷ್ತಾಕ್‌