Select Your Language

Notifications

webdunia
webdunia
webdunia
Monday, 7 April 2025
webdunia

ಕನ್ನಡಿಗರನ್ನು ಕರೆತಂದದ್ದು ಮೋದಿ ಅವರ ವರ್ಷಸ್ಸು

ಯುದ್ಧ
ದಾವಣಗೆರೆ , ಸೋಮವಾರ, 21 ಮಾರ್ಚ್ 2022 (13:17 IST)
ದಾವಣಗೆರೆ : ಉಕ್ರೇನ್ ಯುದ್ಧಭೂಮಿಯಿಂದ 572 ಕನ್ನಡಿಗರನ್ನು ಕರೆತರುವ ಮೂಲಕ ವಿಶ್ವದಾದ್ಯಂತ ಪ್ರಧಾನಿ ನರೇಂದ್ರಮೋದಿ ಅವರ ವರ್ಚಸ್ಸು ಎಷ್ಟಿದೆ ಎಂಬುದು ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
 
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧಭೂಮಿಯಲ್ಲಿ ಸೈನಿಕರನ್ನು ಕರೆತರುವುದೇ ಕಷ್ಟಸಾಧ್ಯ. ಅಂತಹದ್ದರಲ್ಲಿ ಸಂಬಂಧವಿಲ್ಲದ ದೇಶದಿಂದ 572 ಕನ್ನಡಿಗರನ್ನು ಹೊರತಂದಿರುವುದು ಸಾಮಾನ್ಯ ಕೆಲಸವಲ್ಲ. ಜೊತೆಗೆ ಇದು ಮೋದಿ ಅವರ ವರ್ಷಸ್ಸು ಹಾಗೂ ಅಂತಾರಾಷ್ಟ್ರೀಯ ಸಂಬಂಧವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.

ಅಮೇರಿಕಾ ಕೂಡಾ ತನ್ನ ನಾಗರಿಕರನ್ನು ಕೈ ಬಿಟ್ಟಿದೆ. ಆದರೆ, ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ 572 ಕನ್ನಡಿಗರನ್ನು ವಾಪಾಸ್ ತರಲಾಗಿದೆ. ದುರ್ದೈವ ನವೀನ್ ಒಬ್ಬರು ಮೃತಪಟ್ಟಿದ್ದಾರೆ.

ಇದು ಮೋದಿಯವರ ಭಗೀರಥ ಪ್ರಯತ್ನ. ಉಕ್ರೇನ್ನಿಂದ ಕರೆತರುವಾಗ ಭಾರತೀಯರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇಂಡಿಯನ್ ಫ್ಲ್ಯಾಗ್ ಹಿಡಿದರೆ ಸಾಕು ಸುರಕ್ಷಿತವಾಗಿ ಕಳುಹಿಸಿಕೊಡುತ್ತಿದ್ದರು. ನಾವು ವಿದೇಶಾಂಗ ಸಚಿವರೊಂದಿಗೆ, ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ತಿಳಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಮರಳಿದ ಪುರಾತನ ವಸ್ತುಗಳನ್ನು ಪರಿಶೀಲಿಸಿದ ಪ್ರಧಾನಿ