Select Your Language

Notifications

webdunia
webdunia
webdunia
webdunia

ಇಸ್ರೋ ಕೊಟ್ಟ ಆ ಗುಡ್ ನ್ಯೂಸ್ ಏನು ಗೊತ್ತಾ?

ಇಸ್ರೋ ಕೊಟ್ಟ ಆ ಗುಡ್ ನ್ಯೂಸ್ ಏನು ಗೊತ್ತಾ?
ಬೆಂಗಳೂರು , ಬುಧವಾರ, 1 ಜನವರಿ 2020 (12:17 IST)
ಬೆಂಗಳೂರು: ಕಳೆದ ವರ್ಷ ಚಂದ್ರಯಾನ 2 ನಲ್ಲಿ ಇಸ್ರೋ ತಾನು ಅಂದುಕೊಂಡ ಯಶಸ್ಸು ಪಡೆಯಲಾಗಿರಲಿಲ್ಲ. ಆದರೆ ಅಷ್ಟಕ್ಕೇ ಎದೆಗುಂದದ ಇಸ್ರೋ ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್ ಕೊಟ್ಟಿದೆ.


ವರ್ಷದ ಆರಂಭದ ದಿನವಾದ ಇಂದು ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಈ ವರ್ಷದ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ 3 ಯೋಜನೆಯೂ ಸೇರಿದೆ ಎನ್ನುವುದು ವಿಶೇಷ.

ಈ ವರ್ಷ ಮತ್ತೆ ಮಾನವ ರಹಿತ ಚಂದ್ರಯಾನ 3 ಗೆ ಸಿದ್ಧತೆ ನಡೆಸುವುದಾಗಿ ಶಿವನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದಕ್ಕೆ ಈಗಾಗಲೇ ತಯಾರಿಗಳು ನಡೆದಿವೆ ಎಂದಿದ್ದಾರೆ. ಆ ಮೂಲಕ ಮತ್ತೆ ಸೋತರೂ ಎದೆಗುಂದದ ನಮ್ಮ ಹೆಮ್ಮೆಯ ಇಸ್ರೋ ಮತ್ತೊಂದು ಸಾಹಸಕ್ಕೆ ಮುಂದಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಗೃಹ ಸಚಿವರು ಹೇಳಿದ್ದೇನು?