Webdunia - Bharat's app for daily news and videos

Install App

GSLV ರಾಕೆಟ್ ಉಡಾಯಿಸಿ ಶತಕ ಸಿಡಿಸಿದ ಇಸ್ರೋ

Krishnaveni K
ಬುಧವಾರ, 29 ಜನವರಿ 2025 (10:09 IST)
ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಹೊಸ ದಾಖಲೆ ಮಾಡಿದೆ. ಜಿಎಸ್ಎಲ್ ವಿ ರಾಕೆಟ್ ಉಡಾಯಿಸಿ ಹೊಸ ದಾಖಲೆ ಮಾಡಿದೆ.

ಇಂದು ಬೆಳಿಗ್ಗೆ 6.30 ಕ್ಕೆ ಇಸ್ರೋ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್ ವಿಎಸ್ -02 ರನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರೊಂದಿಗೆ 100 ನೇ ಉಪಗ್ರಹ ಲಾಂಚ್ ಮಾಡಿ ದಾಖಲೆಯನ್ನು ಮಾಡಿದೆ.

ಉಪಗ್ರಹ ಉಡಾವಣೆ ಯಶಸ್ವಿಯಾದ ಸುದ್ದಿಯನ್ನು ಖಚಿತಪಡಿಸಿದ ಇಸ್ರೋ ಮುಖ್ಯಸ್ಥ ನಾರಾಯಣನ್, ನಿಗದಿಪಡಿಸಿದ ಕಕ್ಷೆಗೆ ಉಪಗ್ರಹ ತಲುಪಿದೆ. ಈ ಉಪಗ್ರಹ ಉಡಾವಣೆ ಇಸ್ರೋ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಶ್ರೀಹರಿಕೋಟಾದಿಂದ 1979 ರಲ್ಲಿ ಇಸ್ರೋ ಮೊದಲ ರಾಕೆಟ್ ಉಡಾವಣೆ ಮಾಡಿತ್ತು. ಇದಾದ ಬಳಿಕ ಈಗ 46 ವರ್ಷ ಕಳೆದಿದೆ. ಇಷ್ಟು ವರ್ಷಗಳಲ್ಲಿ ಇದು 100 ನೇ ರಾಕೆಟ್ ಉಡಾವಣೆ ಮಾಡಿದೆ.

ಇಸ್ರೋದ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಗೆ ಮೊದಲು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ಎನ್ನಲಾಗುತ್ತಿತ್ತು. ಈಗ ಇದನ್ನು ಕಾರ್ಯಾಚರಣೆ ಮಾಡುವ ಉದ್ದೇಶದಿಂದ ನಾವಿಕ್ ಹೆಸರಿನಿಂದ ಕರೆಯಲಾಗುತ್ತದೆ. ನಾವಿಕ್ ನಲ್ಲಿ 7 ಉಪಗ್ರಹಗಳಿವೆ. ಈ ಉಪಗ್ರಹಗಳು ಭಾರತಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

Operation Sindoor: ಜೈಶ್‌ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್‌ ಮಾವ ಮಟಾಶ್‌

Karnataka Monsoon rain: ರೈತರಿಗೆ ಗುಡ್‌ನ್ಯೂಸ್‌

ನಮ್ಮಲ್ಲಿರುವುದು ಬರೀ 6 ಲಕ್ಷ ಸೈನಿಕರು, ನಾವು ಉಳಿಯುವುದಿಲ್ಲ ಎಂದ ಪಾಕ್‌ನ ಮಾಜಿ ಸೇನಾಧಿಕಾರಿ

ಮುಂದಿನ ಸುದ್ದಿ
Show comments