Select Your Language

Notifications

webdunia
webdunia
webdunia
webdunia

ಪ್ಯಾಲೆಸ್ತೀನ್ ನಲ್ಲಿ 11 ಜನರ ಹತ್ಯೆಗೈದ ಇಸ್ರೇಲ್ ಪಡೆಗಳು

Israeli forces killed 11 people in Palestine
bangalore , ಶುಕ್ರವಾರ, 24 ಫೆಬ್ರವರಿ 2023 (14:20 IST)
ಇಸ್ರೇಲಿ ಪಡೆಗಳು ಬುಧವಾರ ಆಕ್ರಮಿತ ವೆಸ್ಟ್ ಬ್ಯಾಂಕ್ ಫ್ಲ್ಯಾಷ್‌ಪಾಯಿಂಟ್ ಸಿಟಿ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಬಂದೂಕುಧಾರಿಗಳು ಮತ್ತು ನಾಲ್ವರು ನಾಗರಿಕರು ಸೇರಿದಂತೆ 11 ಪ್ಯಾಲೆಸ್ತೀನಿಯನ್ನರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಉಗ್ರಗಾಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಅವರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಗುಂಡು ಹಾರಿಸಲಾಗಿದೆ. ನಬ್ಸ್ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ವಲಯ ಮಾಹಿತಿ ನೀಡಿದೆ. ಇಸ್ರೇಲಿ ಸೇನೆಯಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ತನ್ನ ಇಬ್ಬರು ನಬ್ಸ್ ಕಮಾಂಡರ್ ಗಳನ್ನು ಇಸ್ರೇಲಿ ಪಡೆಗಳು ಮನೆಯೊಂದರಲ್ಲಿ ಸುತ್ತುವರೆದಿದ್ದವು ಎಂದು ಪ್ಯಾಲೇಸ್ತೀನಿಯನ್ ಉಗ್ರಗಾಮಿ ಬಣ ಇಸ್ಲಾಮಿಕ್ ಜಿಹಾದ್ ಹೇಳಿದರು. ಇದರಿಂದ ಗುಂಡಿನ ದಾಳಿ ನಡೆಸಲಾಯಿತು, ಸ್ಫೋಟಗಳು ಸದ್ದು ಮಾಡಿದವು. ಅಲ್ಲದೆ ಸ್ಥಳೀಯ ಯುವಕರು ಶಸ್ತ್ರಸಜ್ಜಿತ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬದುಕಿರುವಾಗಲೇ ಸಮಾದಿ ನಿರ್ಮಿಸಿಕೊಂಡ ವೃದ್ದ ದಂಪತಿ