ದಂತವೈದ್ಯೆಯೊಬ್ಬರು ತನ್ನ ಗೆಳೆಯನಿಂದಲೇ ಕೊಲೆಯಾಗಿರುವ ಘಟನೆ ವರದಿಯಾಗಿದೆ. ದಂತವೈದ್ಯೆಯಾಗಿದ್ದ ಸೋನಾ ತನ್ನ ಪ್ರಿಯತಮನಿಂದಲೇ ಕೊಲೆಯಾಗಿದ್ದಾರೆ. ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ ಸೋನಾ, ಮಹೇಶ್ ಎಂಬಾತನೊಂದಿಗೆ ಸಂಬಂಧದಲ್ಲಿದ್ದಳು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಹೇಶ್ ವಿರುದ್ಧ ಸೋನಾ ಕೇಸ್ ದಾಖಲು ಮಾಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಮಹೇಶ್ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ಧಾನೆ. ತ್ರಿಶೂರ್ ದ ಕುಟ್ಟನೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.