Select Your Language

Notifications

webdunia
webdunia
webdunia
webdunia

ಮದುವೆಯಾಗಿದ್ರೂ ನೀನೇ ಬೇಕು ಎಂದ ಮಹಿಳೆ ಉರುಳಿಸಿದ್ದು ಜೋಡಿ ಹೆಣ

ಮದುವೆಯಾಗಿದ್ರೂ ನೀನೇ ಬೇಕು ಎಂದ ಮಹಿಳೆ ಉರುಳಿಸಿದ್ದು ಜೋಡಿ ಹೆಣ
ಬೆಳಗಾವಿ , ಶುಕ್ರವಾರ, 2 ಅಕ್ಟೋಬರ್ 2020 (23:34 IST)
ಅವರು ಮದುವೆಗೂ ಮೊದಲು ಪರಸ್ಪರ ಸಂಬಂಧದಲ್ಲಿದ್ದರು. ಮದುವೆಯಾದ ಮೇಲೆಯೂ ಅನೈತಿಕ ಸಂಬಂಧ ಬಿಟ್ಟಿರಲಿಲ್ಲ. ಇಲ್ಲಿ ಮಹಿಳೆಯ ಅಕ್ರಮ ಸಂಬಂಧವೇ ಇಬ್ಬರನ್ನು ಕೊಲೆ ಮಾಡಿಸಿದ್ದು, ಅವಳೀಗ ಕಂಬಿ ಎಣಿಸುವಂತಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದ ಗರ್ಭಿಣಿ ಹಾಗೂ ಮಹಿಳೆಯೊಬ್ಬರ ಜೋಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ರೋಹಿಣಿ ಮತ್ತು ರಾಜಶ್ರೀಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಮಹೇಶ್ ಮೊನಪ್ಪ ನಾಯಿಕ, ಕಲ್ಪನಾ ಮಲ್ಲೇಶ್, ರಾಹುಲ್, ರೋಹಿತ್ ವಡ್ಡರ, ಶಾನೂರ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಆರೋಪಿ ಕಲ್ಪನಾ ಹಾಗೂ ಕೊಲೆಯಾದ ರೋಹಿಣಿಯ ಗಂಡ ಗಂಗಪ್ಪನ ನಡುವೆ ಅಕ್ರಮ ಸಂಬಂಧ ಇತ್ತು. ಕಲ್ಪನಾಳಿಗೆ ಗಂಗಪ್ಪ ಕೈಕೊಟ್ಟಿದ್ದರಿಂದಾಗಿ ಕಲ್ಪನಾ ಈ ಕೊಲೆಗಳನ್ನು ಮಾಡಿಸಿದ್ದಾಳೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೆ ಹೈಟೆನ್ಶನ್