ಯಶಸ್ವಿ ರಾಜಕೀಯ ಜೀವನವನ್ನು ಹೊಂದಲು ಸುಳ್ಳು ಹೇಳುವುದು ಸರಿಯೇ: ರಾಹುಲ್ ಗಾಂಧಿಯನ್ನು ಕುಟುಕಿದ ರಾಜನಾಥ್ ಸಿಂಗ್

Sampriya
ಶನಿವಾರ, 8 ನವೆಂಬರ್ 2025 (19:09 IST)
Photo Credit X
ಬಿಹಾರ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಅವರು ಬಿಹಾರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದರು. 

ಅವರು ಶನಿವಾರ ಕಾಂ ರಾಹುಲ್ ಗಾಂಧಿ ಅವರ "ಮತ ಕಳ್ಳತನ" ಆರೋಪದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. 

ರೊಹ್ತಾಸ್‌ನ ದಿನಾರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಅವರು, ಮತದಾರರ ವಂಚನೆ ಆರೋಪದ ಬಗ್ಗೆ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದರು, ಮತಗಳು ಕಳ್ಳತನವಾಗುತ್ತಿವೆ ಎಂದು ಅವರು ನಿಜವಾಗಿಯೂ ನಂಬಿದರೆ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸುವಂತೆ ಒತ್ತಾಯಿಸಿದರು.


ಯಶಸ್ವಿ ರಾಜಕೀಯ ಜೀವನವನ್ನು ಹೊಂದಲು ಸುಳ್ಳು ಹೇಳುವುದು ಮುಖ್ಯವೇ?" ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ "ದೊಡ್ಡ ಪ್ರಮಾಣದ ಮತದಾರರ ವಂಚನೆ" ಎಂದು ಆರೋಪಿಸಿದರು. 

ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ನೀಡಿರುವ ಮತದಾರರ ಪಟ್ಟಿಯನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಸುಮಾರು 25 ಲಕ್ಷ ನಕಲಿ ಮತಗಳಿವೆ ಎಂದು ಆರೋಪಿಸಿದರು. ಭ್ರಷ್ಟ ಮತದಾರರ ಪಟ್ಟಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಲು ತಮ್ಮ ಪಕ್ಷದಿಂದ "ಯಾವುದೇ ಹಿಂದುಳಿದ ವರ್ಗದ ನಾಯಕರಿಗೆ ಅವಕಾಶ ನೀಡುತ್ತಿಲ್ಲ" ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಸಿಂಗ್, ಎನ್‌ಡಿಎ ಎಲ್ಲರಿಗೂ ಸಮಾನ ಮತ್ತು ಸಮರ್ಪಕ ಪ್ರಾತಿನಿಧ್ಯವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪರಾಷ್ಟ್ರಪತಿ ರಾಧಾಕೃಷ್ಣನ್‌ ರಾಜ್ಯದ ಮೊದಲ ಭೇಟಿಯಲ್ಲೇ ಹಲವು ಮಹತ್ವದ ಕಾರ್ಯಕ್ರಮ

ಮತಗಳ್ಳತನ ವಿರುದ್ಧ ಬೃಹತ್ ಸಭೆಗೆ ಸಿದ್ಧತೆ: ಡಿಕೆ ಶಿವಕುಮಾರ್‌

ತಲೆಗೆ ಬಂದೂಕಿಡುವ ಸರ್ಕಾರ ಜನರಿಗೆ ಬೇಡ: ಮಹಾಘಟಬಂಧನ ವಿರುದ್ಧ ಮೋದಿ ವಾಗ್ದಾಳಿ

ಕಾನೂನಿನಲ್ಲಿ ಮಾನ್ಯತೆಯಿಲ್ಲದಿದ್ದರೂ ಸಲಿಂಗ ವಿವಾಹವಾದ ರಿಯಾ ನೃತ್ಯಪಟು ಯುವತಿಯರು

ಎರ್ನಾಕುಲಂ- ಬೆಂಗಳೂರು ಸೇರಿ 4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಗ್ರೀನ್‌ಸಿಗ್ನಲ್‌

ಮುಂದಿನ ಸುದ್ದಿ
Show comments