ನವದೆಹಲಿ : ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಜಾಹೀರಾತಿನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಝೊಮ್ಯಾಟೋ ಬಾಯ್ಕಟ್ಗೆ ಕರೆ ನೀಡಿದ ಬೆನ್ನಲ್ಲೇ ಝೊಮ್ಯಾಟೋ ಕ್ಷಮೆಯಾಚಿಸಿದೆ.
ಝೊಮ್ಯಾಟೋ ತನ್ನ ಜಾಹೀರಾತಿನಲ್ಲಿ ಹೃತಿಕ್ ರೋಷನ್, ಉಜ್ಜೈನಿಯಲ್ಲಿನ ಭಗವಾನ್ ಮಹಾಕಾಳೇಶ್ವರನ ಉಲ್ಲೇಖ ಮಾಡಿ,
ಪ್ಲೇಟ್ ಇಷ್ಟವಾಯಿತೇ, ನೀವು ಉಜ್ಜೈನಿಯಲ್ಲಿದ್ದರೆ, ಮಹಾಕಾಳೇಶ್ವರನಿಂದ ತರಿಸಿದರೆ ಆಯಿತು ಎಂದು ಹೇಳಿದ್ದರು. ಇದು ಹಿಂದೂ ದೇವರು ಮಹಾಕಾಳೇಶ್ವರನಿಗೆ ಅಪಮಾನ ಎಂದು ಹಿಂದೂ ಸಂಘಟನೆಗಳಿಂದ ಝೊಮ್ಯಾಟೋ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು.
ಯಾವ ಸಂಸ್ಥೆಯು ಮಾಂಸಹಾರಿ ಭೋಜನವನ್ನು ಸಹ ವಿತರಿಸುವುದೋ, ಅವರು ಮಹಾಕಾಲೇಶ್ವರರ ಹೆಸರಿನಲ್ಲಿ ಜಾಹೀರಾತು ತಯಾರಿಸಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ.