Select Your Language

Notifications

webdunia
webdunia
webdunia
webdunia

ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಹೊರಗೆ ಹೋದವರ ಬಗ್ಗೆ ಮಾಹಿತಿ ತಿಳಿಯಬಹುದು. ಅದು ಹೇಗೆ ಗೊತ್ತಾ?

ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಹೊರಗೆ ಹೋದವರ ಬಗ್ಗೆ ಮಾಹಿತಿ ತಿಳಿಯಬಹುದು. ಅದು ಹೇಗೆ ಗೊತ್ತಾ?
ಬಿಹಾರ್ , ಮಂಗಳವಾರ, 7 ಮೇ 2019 (07:44 IST)
ಬಿಹಾರ್ : ಸಾಮಾನ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದಾಗ ಬರುವುದು ತಡವಾದರೆ ಅವರ ಬಗ್ಗೆ ಮನೆಯವರಿಗೆ ಚಿಂತೆಯಾಗುವುದು ಸಹಜ. ಹೇಗಿದ್ದಾರೋ?ಏನು ಮಾಡುತ್ತಿದ್ದಾರೋ? ಎಂದು ಕೊರಗುತ್ತಿರುತ್ತಾರೆ. ಆದರೆ ಇನ್ನುಮುಂದೆ ಹೊರಗೆ ಹೋದವರ ಬಗ್ಗೆ ಈ ರೀತಿ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ  ವ್ಯಕ್ತಿಯ ಆರೋಗ್ಯದ ಅಪ್ ​ಡೇಟ್​ಗಳನ್ನು ನೀಡವಂತಹ ಟೀ ಶರ್ಟ್ ಒಂದು ಇದೀಗ ಮಾರುಕಟ್ಟೆಗೆ ಬಂದಿದೆಯಂತೆ.




ಹೌದು. ಬಿಹಾರದ 17 ವರ್ಷ ವಯಸ್ಸಿನ ಹರ್ಷಿಲ್ ಆನಂದ್ ಎಂಬಾತ ಸ್ಮಾರ್ಟ್​ ಟಿ ಶರ್ಟ್​ವೊಂದನ್ನು ಪರಿಚಯಿಸಿದ್ದು, ಇದನ್ನು ಧರಿಸಿದ ವ್ಯಕ್ತಿಯ ರಕ್ತದೊತ್ತಡ, ಇಸಿಜಿ, ದೇಹದೊತ್ತಡ, ಉಸಿರಾಟ ಮತ್ತು ಎದೆ ಬಡಿತದ ಡೇಟಾವನ್ನು ಆತ ಸಾವಿರಾರು ಕಿಲೋ ಮೀಟರ್​ ದೂರವಿದ್ದರೂ  ತಿಳಿಯಬಹುದಂತೆ. ಈ ಟಿ ಶರ್ಟ್ ​ನಲ್ಲಿ ವಿಶೇಷವಾದ ಚಿಪ್ ​ವೊಂದನ್ನು ನೀಡಲಾಗಿದ್ದು, ಇದು ಪ್ರತಿ 5 ಸೆಕೆಂಡುಗಳಿಗೆ ಆರೋಗ್ಯದ ಡೇಟಾವನ್ನು ಅಪ್ ​ಲೋಡ್ ಮಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಪ್ಯಾನಿಕ್ ಬಟನ್​ ಒಂದನ್ನು ನೀಡಲಾಗಿದ್ದು, ಅಪಾಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಈ ಬಟನ್ ಒತ್ತಿದರೆ ನಿಮ್ಮ ಮಾಹಿತಿಯು ಟಿ ಶರ್ಟ್​ ಜೊತೆ ನೀಡಲಾದ ಡಿವೈಸ್ ​ಗೆ ತಲುಪುತ್ತದೆಯಂತೆ.


ಈ ಹೊಸ ವಿನ್ಯಾಸದ ಟೀಶರ್ಟ್ ಸಂಶೋಧನೆಗೆ ಹರ್ಷಿಲ್ ಜತೆ ಬಿ.ಟೆಕ್ ವಿದ್ಯಾರ್ಥಿ ರಂಜನ್ ಕುಮಾರ್, 10ನೇ ತರಗತಿ ಓದುತ್ತಿರುವ ರಾಜಸ್ತಾನದ ರೋಹಿತ್ ದಯಾನಿ, 12ನೇ ತರಗತಿ  ಓದುತ್ತಿರುವ ಜಾರ್ಖಂಡ್​ನ ಶ್ರೀಶಿತ್ ಪ್ರಾಮಾಣಿಕ್ ಸಹಾಯ ಮಾಡಿದ್ದಾರಂತೆ. ಈಗಾಗಲೇ ಈ ಗೆಳೆಯರು ವಿಕಿಬುಕ್ ಎಂಬ ಕಂಪೆನಿಯೊಂದನ್ನು ಹುಟ್ಟು ಹಾಕಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಫುಡ್​ ಆರ್ಡರ್​ ಮಾಡಲು ಅನಾಕೂಲವಾಗುವಂತಹ ಹೊಸ ಡಿವೈಸ್​ ವೊಂದನ್ನು ಕಂಡು ಹಿಡಿಯಲು ಈ ಗೆಳೆಯರು ಪ್ರಯೋಗ ನಡೆಸುತ್ತಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
.

 

 

 

Share this Story:

Follow Webdunia kannada

ಮುಂದಿನ ಸುದ್ದಿ

ಎಎಪಿ ಪಕ್ಷದ ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ