Select Your Language

Notifications

webdunia
webdunia
webdunia
webdunia

ಕೀಳರಿಮೆ, ಅಸೂಯೆಯಿಂದ ಎಂಜಿನಿಯರ್ ಪತ್ನಿಯನ್ನು ಕೊಂದ ಪತಿ!

ಕೀಳರಿಮೆ, ಅಸೂಯೆಯಿಂದ ಎಂಜಿನಿಯರ್ ಪತ್ನಿಯನ್ನು ಕೊಂದ ಪತಿ!
ನೋಯ್ಡಾ , ಭಾನುವಾರ, 14 ಜನವರಿ 2018 (14:07 IST)
ಕೀಳರಿಮೆ ಹಾಗೂ ಅಸೂಯೆ ಕಾರಣದಿಂದ ಎಂಜಿನಿಯರ್‌ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.

ರಿಚಾ ಸಿಸೊಡಿಯಾ (24) ಕೊಲೆಯಾದ ಗೃಹಿಣಿಯಾಗಿದ್ದು, ಎರಡು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ಬಿಟೆಕ್ ಪದವಿ ಮುಗಿಸಿದ ಪತಿ ಕುಲದೀಪ್ ರಾಘವ್ ಪತ್ನಿಯ ಮೇಲೆ ಅರಿತವಾದ ಚಾಕುವಿನಿಂದ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ರಿಚಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಕೆಲಸದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅದೇರೀತಿ ಬುಧವಾರ ಕೂಡ ಜಗಳ ನಡೆದಿದ್ದು, ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ತಾಳ್ಮೆ ಕಳೆದುಕೊಂಡು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಾನು ಮಾಡುತ್ತಿದ್ದ ಕೆಲಸದ ಬಗ್ಗೆ ಪತ್ನಿ ಕೀಳರಿಮೆ ಮತ್ತು ಅಸೂಯೆ ಹೊಂದಿದ್ದಳು ಎಂದು ಪೊಲೀಸರ ಎದುರು ಆರೋಪಿಸಿದ್ದಾನೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸದಾಶಿವ ವರದಿ ಜಾರಿ ಕುರಿತ ಸಭೆ– ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ