Publish Date: Sat, 13 Jan 2018 (14:53 IST)
Updated Date: Sat, 13 Jan 2018 (14:55 IST)
ಉಳ್ಳಾಲ ಟಾರ್ಗೆಟ್ ಗ್ರೂಪ್ ರೌಡಿ ಇಲಿಯಾಸ್ (31) ಎದೆಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಲಾಗಿದೆ.
ಜಾಮೀನಿನ ಮೇಲಿಂದ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ವಿರೋಧಿ ಗುಂಪಿನ ರೌಡಿಗಳು ಕೊಲೆ ಮಾಡಿರಬಹುದು ಎಂದು ಅನುಮಾನಿಸಲಾಗಿದೆ.
ಜೆಪ್ಪಿನ ಮೊಗರಿನ ಕುಡ್ಪಾಡಿಯ ಇಲ್ಯಾಸ್ ಫ್ಲಾಟ್‌ನಲ್ಲಿ ಮಲಗಿದ್ದಾಗ, ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ. ಆಹಾರ ಸಚಿವ ಯು.ಟಿ ಖಾದರ್ ಹಾಗೂ ಶಾಸಕ ಮೊಯಿದ್ದೀನ್ ಜೊತೆ ಇಲಿಯಾಸ್ ಕಾಣಿಸಿಕೊಂಡಿದ್ದ ಫೋಟೋವೊಂದು ಇತ್ತೀಚೆಗೆ ವೈರಲ್ ಆಗಿತ್ತು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ಇಲಿಯಾಸ್ ಕೊಲೆ, ಅತ್ಯಾಚಾರ, ಅಪಹರಣದಂತಹ ಕೃತ್ಯ ಎಸಗುತ್ತಿದ್ದ ಗುಂಪಿನ ನಾಯಕನಾಗಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.