Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಕೊಲೆ ನಡೆಯುತ್ತಿವೆ– ಶೋಭಾ

ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಕೊಲೆ ನಡೆಯುತ್ತಿವೆ– ಶೋಭಾ
ಬೆಂಗಳೂರು , ಶನಿವಾರ, 13 ಜನವರಿ 2018 (15:08 IST)
ಕರಾವಳಿಯಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿಯೇ ಕೊಲೆಗಳು ನಡೆಯುತ್ತಿವೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
 
ಮಂಗಳೂರಿನಲ್ಲಿ ನಡೆದ ಇಲಿಯಾಸ್ ಕೊಲೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾರನ್ನು ಹತ್ಯೆ ಮಾಡ್ತಾರೋ ಗೊತ್ತಿಲ್ಲ. ಗುಪ್ತಚರ ಇಲಾಖೆ ಇದ್ದರೂ ಸರ್ಕಾರ ಅಪರಾಧಗಳನ್ನು ತಡೆಯಲು ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದ್ದಾರೆ.
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿ ಹಿಂದೂ-ಮುಸ್ಲಿಂ ಮಧ್ಯೆ ಜಗಳ ಹಚ್ಚುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿಂದೂಗಳನ್ನು ಮುಸಲ್ಮಾನರು ಕೊಲೆ ಮಾಡಬೇಕು. ಮುಸಲ್ಮಾನರನ್ನು ಹಿಂದೂಗಳು ಕೊಲೆ ಮಾಡಬೇಕು ಎನ್ನುವ ಕುಮ್ಮಕ್ಕು ನೀಡಲಾಗುತ್ತಿದೆ. ಅಪರಾಧಿಗಳನ್ನು ಬಂಧಿಸುವಂತಹ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಹೆಚ್ ಡಿ ಕೆ ಕೊಡಲಿರುವ ಗಿಫ್ಟ್ ಏನು ಗೊತ್ತಾ…?