Publish Date: Thu, 11 Jan 2018 (14:59 IST)
Updated Date: Thu, 11 Jan 2018 (15:00 IST)
ದೇಶದಲ್ಲಿ ಉಗ್ರರನ್ನು ಬೆಳೆಸಿರುವ ರಾಷ್ಟ್ರೀಯ ಕಾಂಗ್ರೆಸ್, ಈಗ ಕರ್ನಾಟಕದಲ್ಲಿಯೂ ಅಶಾಂತಿ ವಾತಾವರಣವನ್ನು ಸೃಷ್ಟಿಸಲು ದೇಶದ್ರೋಹಿ ಸಂಘಟನೆಗಳ ಜೊತೆಗೆ ಕೂಡಿಕೊಂಡು ಉಗ್ರವಾದ ಬೆಳೆಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ಉಗ್ರಾಮಿಗಳು ಎಂದು ಕರೆದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಅರ್ ಎಸ್ ಎಸ್ ಕಳೆದ ಎಂಭತ್ತು ವರ್ಷಗಳಿಂದ ದೇಶಸೇವೆ ಮಾಡುತ್ತಿರುವ ಸಂಸ್ಥೆಯಾಗಿದ್ದು ಎಂದೂ ತಲ್ವಾರ್, ಚಾಕು ಚೂರಿ ಹಿಡಿದಿಲ್ಲ. ಕಾಂಗ್ರೆಸ್ ನಾಯಕರು ತಕ್ಷಣ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.