Select Your Language

Notifications

webdunia
webdunia
webdunia
webdunia

ಅನುದಾನದ ಲೆಕ್ಕಕೇಳಿದ ಅಮಿತ್ ಶಾಗೆ ಪಿಜಿಆರ್ ಸಿಂಧ್ಯಾ ತಿರುಗೇಟು

ಅನುದಾನದ ಲೆಕ್ಕಕೇಳಿದ ಅಮಿತ್ ಶಾಗೆ ಪಿಜಿಆರ್ ಸಿಂಧ್ಯಾ ತಿರುಗೇಟು
ಬೆಂಗಳೂರು , ಗುರುವಾರ, 11 ಜನವರಿ 2018 (14:50 IST)
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೂರು ಲಕ್ಷ ಕೋಟಿ ಅನುದಾನ ನೀಡಿರುವುದು ಅದು ರಾಜ್ಯಕ್ಕೆ ನೀಡಿರುವ ಪಾಲು, ಲೆಕ್ಕ ಕೇಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದನ್ನು ಅರಿತುಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ತಿರುಗೇಟು ನೀಡಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದವರು ಕೇಂದ್ರದ ಗುಲಾಮರಲ್ಲ. ಅನುದಾನದ ಲೆಕ್ಕ ಕೊಡಿ ಎಂದು ಕೇಳುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
 
ಆರ್‍ಎಸ್‍ಎಸ್‍ ನಿಷೇಧ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳುತ್ತಾರೆ. ರಾಜ್ಯದಲ್ಲಿ ಇವರದೇ ಪಕ್ಷ ಅಧಿಕಾರದಲ್ಲಿದೆ. ಆರ್‍ಎಸ್‍ಎಸ್ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆ ಮಾಹಿತಿ ಸಂಗ್ರಹಿಸಿ ನಿಷೇಧ ಮಾಡಲು ಶಿಫಾರಸು ಮಾಡಲಿ. ಕೇವಲ ಆರೋಪ-ಪ್ರತ್ಯಾರೋಪ ಮಾಡುತ್ತ ಕೂರುವುದು ಸರಿಯಲ್ಲ. ಇದು ರಾಷ್ಟ್ರೀಯ ಪಕ್ಷಗಳ ಜಾಯಮಾನ ಆಗಿದೆ ಎಂದು ದೂಷಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಯದ ವಾತಾವರಣ ಸೃಷ್ಠಿಸುವ ಬಿಜೆಪಿಯವರು ಜಿಹಾದಿಗಳು– ದಿನೇಶ್ ಗುಂಡೂರಾವ್