Webdunia - Bharat's app for daily news and videos

Install App

Indore Raja Raguvamshi Case: ಸೊಸೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಜ ರಘುವಂಶಿ ತಾಯಿ

Sampriya
ಮಂಗಳವಾರ, 10 ಜೂನ್ 2025 (16:04 IST)
Photo Courtesy X
ಇಂದೋರ್ (ಮಧ್ಯಪ್ರದೇಶ):  ಮೇಘಾಲಯದಲ್ಲಿ ನಡೆದ ಉದ್ಯಮಿ ರಾಜಾ ರಘುವಂಶಿ ಕೊಲೆ ಸಂಬಂಧ ಅವರ ತಾಯಿ ಉಮಾ ರಘುವಂಶಿ ಅವರು ಮಂಗಳವಾರ ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. 

ನನ್ನ ಮಗನಿಗೆ ನ್ಯಾಯ ಬೇಕು. ಆರೋಪಿಗಳನ್ನು ಗಲ್ಲಿಗೇರಿಸಬೇಕು. ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಒಬ್ಬ ವ್ಯಕ್ತಿಯೇ ಈ ಪ್ರಕರಣವನ್ನು ಸಂಘಟಿಸಿ ನಡೆಸಲು ಸಾಧ್ಯವಿಲ್ಲ. ಇದರ ಹಿಂದೆ ಇನ್ನೆಷ್ಟು ಜನ ಇದ್ದಾರೆ ಎಂದು ಆರೋಪಿಸಿದರು. 

ಸೊಸೆ ಸೋನಮ್  ಬಗ್ಗೆ ಮಾತನಾಡಿದ ಉಮಾ ಅವರು, ಆಕೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಖುಷಿಯಾಗಿದ್ವಿ.  ನಾವು ಆಕೆಯ ಹಿಂದಿನ ವಿಚಾರವನ್ನು ಯಾವುದನ್ನು ತಿಳಿದುಕೊಂಡಿರಲಿಲ್ಲ. ನಮ್ಮ ಕುಟುಂಬಕ್ಕೆ ಬಂದ್ಮೇಲೆ ಅಷ್ಟೇ ಆಕೆ ಹೇಗಿರ್ತಾಲೆ ಎಂಬುದು ಮುಖ್ಯವಾಗಿತ್ತು. ರಾಜಾ ಮದುವೆಯಲ್ಲಿ ತುಂಬಾ ಸಂತೋಷವಾಗಿದ್ದ. ನಾನು ಕೊನೆಯ ಬಾರಿಗೆ ಅವರೊಂದಿಗೆ ಮಾತನಾಡಿದ್ದು ಮೇ 23 ರಂದು. ಕೊನೆಯವರೆಗೂ ನನಗೆ ಯಾವುದೇ ಅನುಮಾನಗಳಿರಲಿಲ್ಲ ಎಂದರು. 

ಮೃತ ರಾಜಾ ರಘುವಂಶಿ ಅವರ ಸಹೋದರ ವಿಪಿನ್ ರಘುವಂಶಿ ಪ್ರತಿಕ್ರಿಯಿಸಿ, ಈ ಕೊಲೆ ಪ್ರಕರಣದಲ್ಲಿ ಸೋನಮ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಿದರು. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ. 

ಸೋನಮ್ ರಘುವಂಶಿ ಅವರ ತಾಯಿ ತಮ್ಮ ಕುಟುಂಬದಿಂದ ಮಾಹಿತಿಯನ್ನು ಮರೆಮಾಡಿದ್ದಾರೆ ಮತ್ತು ರಾಜ್ ಕುಶ್ವಾಹ ಮತ್ತು ಅವರ ಮಗಳು ಸೋನಮ್ ನಡುವಿನ ಸಂಬಂಧದ ಬಗ್ಗೆಯೂ ಅವರಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆನಂದ್ ಎಂದು ಗುರುತಿಸಲಾದ ನಾಲ್ಕನೇ ಆರೋಪಿಯನ್ನು ಮಂಗಳವಾರ 7 ದಿನಗಳ ಕಾಲ ಟ್ರಾನ್ಸಿಟ್ ರಿಮಾಂಡ್‌ಗೆ ಕಳುಹಿಸಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ

ಡೊನಾಲ್ಡ್ ಟ್ರಂಪ್ ದುಬಾರಿ ಸುಂಕ ಇಂದಿನಿಂದ ಜಾರಿಗೆ: ಭಾರತದ ಯಾವ ಉದ್ಯಮಗಳಿಗೆ ಹೊಡೆತ

ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ: ಕೆ ಸಿ ವೇಣುಗೋಪಾಲ್

ಮುಂದಿನ ಸುದ್ದಿ
Show comments