Select Your Language

Notifications

webdunia
webdunia
webdunia
webdunia

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

Indore murder

Krishnaveni K

ಇಂಧೋರ್ , ಮಂಗಳವಾರ, 10 ಜೂನ್ 2025 (10:52 IST)
ಇಂಧೋರ್: ಪತಿ ರಾಜ ರಘುವಂಶಿಯನ್ನು ಕೊಲೆ ಮಾಡಿದ ಬಳಿಕ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ ರಘುವಂಶಿ ಸಿಕ್ಕಿ ಬೀಳಲು ಆರೋಪಿಗಳು ಮಾಡಿದ ಈ ಒಂದು ತಪ್ಪು ಕಾರಣವಾಯ್ತು. ಅದೇನು ಇಲ್ಲಿದೆ ನೋಡಿ ವಿವರ.

ಹನಿಮೂನ್ ಗೆಂದು ಪ್ಲ್ಯಾನ್ ಮಾಡಿ ಗಂಡ ರಾಜ ರಘುವಂಶಿಯನ್ನು ಕರೆದುಕೊಂಡು ಹೋಗಿದ್ದ ಸೋನಮ್, ಅಲ್ಲಿ ಪ್ರಿಯಕರ ರಾಜ್ ಖುಶ್ವಾ ಮತ್ತು ಆತನ ಸ್ನೇಹಿತರ ಜೊತೆ ಸೇರಿಕೊಂಡು ಕೊಲೆ ಮಾಡಿ ಮೃತದೇಹವನ್ನು ಕಮರಿಗೆ ಎಸೆದು ಎಸ್ಕೇಪ್ ಆಗಿದ್ದಳು.

ಮೇ 18 ಕ್ಕೆ ರಾಜ್ ಖುಶ್ವಾ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ. ಆದರೆ ಆ ಯೋಜನೆ ಆಗ ಕೈ ಕೊಟ್ಟಿತ್ತು. ಬಳಿಕ ಸೋನಮ್ ಮೇಘಾಲಯಕ್ಕೆ ಹನಿಮೂನ್ ಗೆ ಹೋಗಲು ಗಂಡನನ್ನು ಒಪ್ಪಿಸಿದ್ದಳು. ಅದರಂತೆ ಮೇ 20 ಕ್ಕೆ ದಂಪತಿ ಮೇಘಾಲಯಕ್ಕೆ ಹೊರಟಿದ್ದರು. ಮೇ 23 ರಂದು ತಾವು ಉಳಿದುಕೊಂಡಿದ್ದ ಸ್ಥಳದಿಂದ ಸ್ಕೂಟರ್ ಒಂದನ್ನು ಬುಕ್ ಮಾಡಿದ್ದ ದಂಪತಿ ಮೇಘಾಲಯದ ಪ್ರಸಿದ್ಧ ಲಿವಿಂಗ್ ರೂಟ್ಸ್ ಕಣಿವೆ ವೀಕ್ಷಣೆಗೆ ತೆರಳಿದ್ದರು. ಇದಾದ ಬಳಿಕ ದಂಪತಿ ಕುಟುಂಬದವರ ಸಂಪರ್ಕಕ್ಕೆ ಸಿಗಲಿಲ್ಲ.

ಅವರು ತೆರಳಿದ್ದ ಸ್ಕೂಟರ್ ಶಿಲ್ಲೋಂಗ್ ನಿಂದ ಸೋಹ್ರಾ ನಡುವಿನ ಕೆಫೆಯೊಂದರ ಬಳಿ ಪತ್ತೆಯಾಗಿತ್ತು. ಇದಾದ ಬಳಿಕ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಅಲ್ಲಿಯೂ ಮಳೆಯೂ ಇದ್ದಿದ್ದರಿಂದ ಅವರ ಹುಡುಕಾಟಕ್ಕೆ ಕೊಂಚ ಅಡಚಣೆಯಾಗಿತ್ತು.

ಜೂನ್ 2 ರಂದು ಮೇಘಾಲಯ ಪೊಲೀಸರಿಗೆ ರಾಜ ರಘುವಂಶಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ಮುಖಭಾಗ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ ಆತನ ಕೈಯಲ್ಲಿದ್ದ ರಾಜ ಎನ್ನುವ ಟ್ಯಾಟೂವಿನಿಂದ ಇದು ಆತನೇ ಎಂದು ಖಚಿತಪಡಿಸಲಾಯಿತು. ಮೃತದೇಹದ ಬಳಿಕ ಒಬ್ಬ ಮಹಿಳೆಯ ಬಿಳಿ ಶರ್ಟ್, ಒಡೆದ ಮೊಬೈಲ್ ಸ್ಕ್ರೀನ್ ಚೂರು, ಒಂದು ಸ್ಟ್ರಿಪ್ ಔಷಧಿ ಕೂಡಾ ಲಭ್ಯವಾಗಿತ್ತು.  ಪೋಸ್ಟ್ ಮಾರ್ಟಂನಲ್ಲಿ ಆತನ ತಲೆಗೆ ಎರಡು ಭಾರಿ ಬಲವಾದ ಆಯುಧ ಬಳಸಿ ಹೊಡೆದಿದ್ದು ಸ್ಪಷ್ಟವಾಗಿತ್ತು.

ಸೋನಮ್ ಮತ್ತು ರಾಜ್ ಮಾಡಿದ್ದ ಬಿಗ್ ಮಿಸ್ಟೇಕ್ ಏನು
ಆರೋಪಿಗಳಾದ ಸೋನಮ್ ಮತ್ತು ರಾಜ್ ಖುಶ್ವಾ ಮಾಡಿದ ಒಂದೇ ಒಂದು ಮಿಸ್ಟೇಕ್ ನಿಂದ ಪೊಲೀಸರಿಗೆ ಅವರ ಸುಳಿವು ಸಿಕ್ಕಿತ್ತು. ರಾಜ ರಘುವಂಶಿ ಕೊಲೆಗೆ ಬಳಸಿದ್ದ ಆಯುಧವನ್ನು ಮೇಘಾಲಯ ಪೊಲೀಸರು ಪತ್ತೆ ಮಾಡಿದಾಗ ಇಂತಹ ಚಾಕು ಈ ಪ್ರದೇಶದಲ್ಲಿ ಬಳಸುವುದಿಲ್ಲ ಎಂದು ತಿಳಿದುಬಂತು. ಹೀಗಾಗಿಯೇ ಹೊರಗಿನಿಂದ ಬಂದವರು ಯಾರೋ ಕೃತ್ಯವೆಸಗಿದ್ದಾರೆ ಎನ್ನುವುದು ಖಚಿತವಾಗಿತ್ತು. ಹೀಗಾಗಿ ಪೊಲೀಸರು ಪತ್ನಿಯ ಮತ್ತು ಆರೋಪಿಗಳ ಕಾಲ್ ಪರಿಶೀಲನೆ ಮಾಡಿದ್ದರು. ಆಗ ಪತ್ನಿ ಸೋನಮ್ ಆರೋಪಿಗಳಲ್ಲಿ ಒಬ್ಬಾತನಿಗೆ ಪದೇ ಪದೇ ಕಾಲ್ ಮಾಡಿದ್ದು ಸ್ಪಷ್ಟವಾಗಿತ್ತು. ಇದರಿಂದಾಗಿಯೇ ಆರೋಪಿಗಳು ಸಿಕ್ಕಿಬಿದ್ದರು ಎಂದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಯಾಕೆ ಚಿಕ್ಕ ವಯಸ್ಸಿನ ಹುಡುಗನ ಕಡೆಗೆ ಆಕರ್ಷಿತರಾಗುತ್ತಾರೆ