Webdunia - Bharat's app for daily news and videos

Install App

Indore murder: ಖತರ್ನಾಕ್ ಸೋನಮ್ ರಘುವಂಶಿ ಲವ್ವರ್ ಫೋಟೋ ರಿವೀಲ್: ಇವನಿಗಾಗಿ ಇಷ್ಟೆಲ್ಲಾ ಮಾಡಿದ್ಳಾ

Krishnaveni K
ಸೋಮವಾರ, 9 ಜೂನ್ 2025 (14:55 IST)
Photo Credit: X
ಇಂಧೋರ್: ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ರಾಜ ರಘುವಂಶಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸೋನಮ್ ತನ್ನ ಗಂಡನನ್ನು ಕೊಲೆ ಮಾಡಿದ್ದು ಆಕೆಯ ಲವ್ವರ್ ಗಾಗಿ. ಇದೀಗ ಆತನ ಫೋಟೋ ಕೂಡಾ ರಿವೀಲ್ ಆಗಿದೆ.

ಸೋನಮ್ ಗೆ ರಘುವಂಶಿ ಜೊತೆ ಮದುವೆ ಇಷ್ಟವಿರಲಿಲ್ಲ. ಯಾಕೆಂದರೆ ಆಕೆಗೆ ಮೊದಲೇ ರಾಜ್ ಖುಶ್ವಾ ಎಂಬಾತನ ಜೊತೆ ಪ್ರೇಮ ಸಂಬಂಧವಿತ್ತು. ಆದರೆ ಮನೆಯವರ ಒತ್ತಾಯಕ್ಕೆ ರಘುವಂಶಿಯನ್ನು ಮದುವೆಯಾಗಿದ್ದಳು. ಇದೀಗ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರಘುವಂಶಿಯನ್ನು ಕೊಲೆ ಮಾಡಲು ಆಕೆ ಸಂಚು ರೂಪಿಸಿದ್ದಳು.

ಅದರ ಪ್ರಕಾರವೇ ಹನಿಮೂನ್ ನೆಪ ಮಾಡಿ ಗಂಡನನ್ನು ಕರೆದೊಯ್ದು ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಇದೀಗ ಆಕೆಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಲವ್ವರ್ ವಿಚಾರ ಬಯಲಾಗಿದೆ. ರಾಜ್ ಖುಶ್ವಾ ವಯಸ್ಸಿನಲ್ಲಿ ಸೋನಮ್ ಗಿಂತ 5 ವರ್ಷ ಚಿಕ್ಕವನು ಎನ್ನಲಾಗಿದ್ದು, ಪ್ಲೈವುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ರಾಜ್ ಖುಶ್ವಾ ಸ್ನೇಹಿತರೇ ಕೊಲೆ ಮಾಡಲು ಸುಪಾರಿ ಪಡೆದುಕೊಂಡವರು ಎಂದು ತಿಳಿದುಬಂದಿದೆ. ರಘುವಂಶಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದುರುಳರು ಕೊಚ್ಚಿ ಕೊಲೆ ಮಾಡಿ ಕಮರಿಗೆ ಎಸೆದಿದ್ದರು. ಬಳಿಕ ಸೋನಮ್ ಗೆ ಗೋರಖ್ ಪುರ ಮಾರ್ಗವಾಗಿ ನೇಪಾಳಕ್ಕೆ ಓಡಿ ಹೋಗುವ ಯೋಜನೆಯಿತ್ತು. ಆದರೆ ಗೋರಖ್ ಪುರದಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಆಕೆಯನ್ನು ಬಂದಿಸಿದ್ದರು. ಆಕೆಯ ಲವ್ವರ್ ರಾಜ್ ಮತ್ತು ಇತರರನ್ನು ಇಂಧೋರ್ ನಿಂದಲೇ ಬಂಧಿಸಲಾಯಿತು. ಆಕೆಯ ಫೋನ್ ಕರೆಗಳನ್ನು ಪರಿಶೀಲಿಸಿದಾಗ ರಾಜ್ ಜೊತೆ ಸಾಕಷ್ಟು ಸಮಯ ಫೋನ್ ನಲ್ಲಿ ಮಾತನಾಡಿದ್ದು ತಿಳಿದುಬಂದಿದೆ.

ಇನ್ನು, ಲವ್ವರ್ ನ ಫೋಟೋ ರಿವೀಲ್ ಮಾಡಿದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಒಳ್ಳೆ ಹೀರೋ ಥರಾ ಇದ್ದ ಗಂಡನನ್ನು ಬಿಟ್ಟು ಇಂತಹವನಿಗಾಗಿ ಕೊಲೆ ಮಾಡಿದಳಾ ಎಂದು ಜನ ಹಿಡಿಶಾಪ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

Viral Video, ಪಾಟ್ನಾ: ಹಾಡಹಗಲೇ ಆಸ್ಪತ್ರೆಯೊಳಗೆ ನುಗ್ಗಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಐವರ ಗುಂಪು

ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments