ನಮ್ಮ ಬೆಂಗಳೂರಿನ ಜನ ಸೇರಿದಂತೆ ಬೇರೆ ರಾಷ್ಟ್ರಗಳ ಜನರು ಬೇರೆ ದೇಶಕ್ಕೆ ಕಾಲಿಡುವ ಮಹದಾಸೆ ಹೊಂದುರುತ್ತಾರೆ.ಕೆಲವರು ದೇಶ ಸುತ್ತುವುದೇ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ.ಅಂತವರಿಗೆ ಈಗ ಸಾಲ್ವಡಾರ್ ಬಂದರು ಪ್ರಾಧಿಕಾರ ಶಾಕ್ ಕೊಟ್ಟಿದೆ.
ಭಾರತ ಅಥವಾ 50ಕ್ಕೂ ಹೆಚ್ಚು ಆಫ್ರಿಕನ್ ರಾಷ್ಟ್ರಗಳ ಯಾವುದಾದ್ರೂ ಒಂದು ದೇಶದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುವ ಜನರು 1,000 ಡಾಲರ್ ಅಥವಾ ಅಂದಾಜು 83 ಸಾವಿರ ರೂ. ಶುಲ್ಕವನ್ನು ಪಾವತಿಸಲೇಬೇಕು ಎಂದು ಎಲ್ ಸಾಲ್ವಡಾರ್ ಬಂದರು ಪ್ರಾಧಿಕಾರವು ಅಕ್ಟೋಬರ್ 20 ರಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಸಂಗ್ರಹಿಸಿದ ಹಣವನ್ನು ರಾಷ್ಟ್ರದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಧಾರಿಸಲು ಬಳಸಲಾಗುವುದು ಎಂದೂ ಪ್ರಾಧಿಕಾರ ಹೇಳಿದೆ.ಭಾರತೀಯರು ಈ ದೇಶಕ್ಕೆ ಕಾಲಿಟ್ರೂ 94 ಸಾವಿರ ರೂ. ಕೊಡ್ಬೇಕು.