Select Your Language

Notifications

webdunia
webdunia
webdunia
webdunia

ತಾಯಂದಿರಿಗಾಗಿ ಬೇಬಿ ಬರ್ತ್‌ ಆರಂಭಿಸಿದ ರೈಲ್ವೆ ಇಲಾಖೆ!

Indian Railways baby Berth mothers day ಅಮ್ಮಂದಿರ ದಿನಾಚರಣೆ ರೈಲ್ವೆ ಬೇಬಿ ಬರ್ತ್
bengaluru , ಬುಧವಾರ, 11 ಮೇ 2022 (14:05 IST)
ಮಕ್ಕಳಿಗೆ ಹಾಲುಣಿಸಲು ಹಾಗೂ ಸುಖ ಪ್ರಯಾಣಕ್ಕಾಗಿ ಕೇಂದ್ರ ರೈಲ್ವೆ ಇಲಾಖೆ ಉತ್ತರ ಭಾರತದಲ್ಲಿ ಪ್ರಾಯೋಗಿಕವಾಗಿ ಬೇಬಿ ಬರ್ತ್‌ ಆರಂಭಿಸಿದೆ.
ಮಹಿಳಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆ ಡೆಲ್ಲಿ ವಿಭಾಗದಲ್ಲಿ ಹೊಸ ಭೋಗಿ ಪ್ರಯೋಗಿಕವಾಗಿ ಚಾಲನೆ ನೀಡಿದ್ಧಾರೆ.
ಹಸುಗೂಸುಗಳಿಗೆ ಹಾಲುಣಿಸಲು ಹಾಗೂ ಮಕ್ಕಳೊಂದಿಗೆ ಮಹಿಳೆಯರು ಸುಖ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಉತ್ತರ ಭಾರತದ ವಿಭಾಗೀಯ ಮಟ್ಟದಲ್ಲಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಬೇಬಿ ಬರ್ತ್‌ ವಿಶೇಷ ಭೋಗಿ ಸಂಚಾರ ಆರಂಭಿಸಿದ್ದು, ಈ ಭೋಗಿಯಲ್ಲಿ ತಾಯಿ ಮತ್ತು ಮಗು ಒಟ್ಟಿಗೆ ಕುಳಿತುಕೊಳ್ಳಲು ಹಾಗೂ ಮಲಗಲು ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಗು ಕೆಳಗೆ ಬೀಳದಂತೆ ಬೆಲ್ಟ್‌ ಹಾಕುವ ವ್ಯವಸ್ಥೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ಪ್ಲೇ ಸ್ಟೋರ್ ನಿಂದ ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್ ಗಳು ಡಿಲಿಟ್!