Select Your Language

Notifications

webdunia
webdunia
webdunia
webdunia

Indian Army: ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Operation Kellar

Krishnaveni K

ಜಮ್ಮು ಕಾಶ್ಮೀರ , ಗುರುವಾರ, 15 ಮೇ 2025 (09:18 IST)
ಜಮ್ಮು ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಭಾರತೀಯ ಸೇನೆ ಮೂವರು ಉಗ್ರರನ್ನು ಇಂದು ಬೆಳ್ಳಂ ಬೆಳಿಗ್ಗೆಯೇ ಹೊಡೆದುರುಳಿಸಿದೆ.

ಆಪರೇಷನ್ ಸಿಂಧೂರ್ ಬಳಿಕವೂ ಭಾರತೀಯ ಸೇನೆಯ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಇಂದು ಬೆಳಿಗ್ಗೆಯೇ ಪುಲ್ವಾಮ ಬಳಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ.

ಇದರಲ್ಲಿ ಉಗ್ರರನ್ನು ಸುತ್ತುವರೆದ ಭಾರತೀಯ ಯೋಧರು ಮೂವರನ್ನೂ ಕೊಂದು ಹಾಕಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯೋಧರಿಗೆ ಸೇನೆ ಕೂಡಾ ಸಾಥ್ ನೀಡಿದೆ. ಇವರೆಲ್ಲರೂ ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ.

ಆಪರೇಷನ್ ಸಿಂಧೂರ್ ಬಳಿಕ ಭಾರತೀಯ ಸೇನೆ ನಿರಂತರವಾಗಿ ಉಗ್ರರ ವಿರುದ್ಧ ಕಣಿವೆ ರಾಜ್ಯದಲ್ಲಿ ಕಾರ್ಯಾಚರಣೆ ಮುಂದುವರಿಸಿದೆ. ಕಳೆದ 48 ಗಂಟೆಗಳಲ್ಲಿ ಭಾರತೀಯ ಸೇನೆ ಇದರೊಂದಿಗೆ 6 ಉಗ್ರರನ್ನು ಹತ್ಯೆ ಮಾಡಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಇಂದು ಭಾರೀ ಮಳೆ