Publish Date: Tue, 30 Jan 2024 (19:00 IST)
Updated Date: Tue, 30 Jan 2024 (19:22 IST)
ಸೋಮಾಲಿಯಾ :ಎಐ ನಯೀಮ್ ಎಂಬ ಹಡಗಿನಲ್ಲಿ ಪಾಕಿಸ್ತಾನದ ಪ್ರಜೆಗಳು ಪ್ರಯಾಣಿಸುತ್ತಿದ್ದರು ಈ ವೇಳೆ ಸೋಮಾಲಿಯ ಕಡಲ್ಗಳ್ಳರ ಗುಂಪು ಹಠಾತ್ ದಾಳಿ ನಡೆಸಿತ್ತು. ತಕ್ಷಣವೇ ಇದೇ ಸರಹದ್ದಿನಲ್ಲಿ ಸಂಚರಿಸಸುತ್ತಿದ್ದ ಭಾರತದ ನೌಕಾಪಡೆ ಜಾಗೃತಗೊಂಡಿತ್ತು.
ಕಡಲ್ಗಳ್ಳರಿಂದ ಅಪಹೃತವಾಗಿದ್ದ 19 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಭಾರತೀಯ ನೌಕಾ ದಳದ ಐಎನ್‌ಸಿ ಸುಮಿತ್ರ ರಕ್ಷಿಸಿದೆ. ಅರೇಬಿಯನ್ ಸಮುದ್ರದಲ್ಲಿ 11 ಮಂದಿ ಕಡಲ್ಗಳ್ಳರ ಗುಂಪೊಂದು ಹಡಗೊಂದನ್ನು ಅಪಹರಿಸಿ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. ನಯೀಮ್ ಹಡಗಿನ ರಕ್ಷಣೆಗೆ ಧಾವಿಸಿದ ಐಎನ್‌ಸಿ ಸುಮಿತ್ರ ಕಡಲ್ಗಳ್ಳರನ್ನು ಬಂಧಿಸಿ ಅಪಹೃತರನ್ನು ಬಿಡುಗಡೆಗೊಳಿಸಿದೆ.